ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಟಿಪಿಸಿಆರ್ ಟೆಸ್ಟ್ ನಲ್ಲೂ ಪತ್ತೆಯಾಗಲ್ಲ ಒಮ್ರಿಕಾನ್ ವೈರಸ್

ಬೆಂಗಳೂರು: ಮಹಾಮಾರಿ ಓಮಿಕ್ರಾನ್ ಪತ್ತೆ ಮಾಡುವುದು ತಲೆ ನೋವಾಗಿ ಪರಿಣಮಿಸಿದೆ. ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕಿನಂತೆ ಈ ವೈರಸ್ ಸುಲಭವಾಗಿ ಪತ್ತೆಯಾಗೋದಿಲ್ಲವಂತೆ.

ಹೌದು ಕೋವಿಡ್​ಗಿಂತ ಭಿನ್ನವಾಗಿರುತ್ತೆ ಒಮೈಕ್ರಾನ್ ಟೆಸ್ಟ್. ಒಮೈಕ್ರಾನ್ ಪತ್ತೆ ಹಚ್ಚಲು ಹತ್ತು‌ ಹಲವು ಹಂತ ದಾಟಬೇಕಾಗುತ್ತದೆ. ಇತ್ತೀಚೆಗೆ ಬಂದಿರುವ ಆರ್ ಟಿಪಿಸಿಆರ್ ಜಿನ್ ಟೆಸ್ಟ್ ಮಾಡಬಹುದಾಗಿದೆ ಅದು ಹೇಗೆಂದರೆ ಮೊದಲು ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ N ಜಿನ್, R1 ಜಿನ್, ಪರೀಕ್ಷೆ ಮಾಡಲಾಗುತ್ತೆ. S ಜೀನ್ ಬಂದರೆ ಅದನ್ನು ಅನುಮಾನದ ಹಿನ್ನೆಲೆ ಕೋವಿಡ್ ಸೋಂಕಿತರ ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಹಿಸಲಾಗುತ್ತೆ. ಆಗ ಮಾತ್ರ ಒಮೈಕ್ರಾನ್ ಸೋಂಕಿತರ ಪತ್ತೆ ಸಾಧ್ಯವಾಗಲಿದೆ

ಈವರೆಗಿನ ಎಲ್ಲಾ ವೇರಿಯಂಟ್ಗಿಂತ ಓಮಿಕ್ರಾನ್ ಪತ್ತೆ ತೀರಾ ಕ್ಲಿಸ್ಟಕರವಾಗಿದ್ದು, ಆರ್ಟಿಪಿಸಿಆರ್ ನಲ್ಲಿ ಓಮಿಕ್ರಾನ್ ಸೋಂಕುಕಾಣಿಸಿಕೊಳ್ಳದಿರಬಹುದು.ಡೆಲ್ಟಾ ವೇಳೆಯೇ ಈ ಸಮಸ್ಯೆ ತಲೆದೋರಿತ್ತು.ಈಗ ಓಮಿಕ್ರಾನ್ ವೇಳೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂಜೀವ್ ಕತ್ತಿ ಮಾಹಿತಿ ನೀಡಿದರು.

ಒಮೈಕ್ರಾನ್ ಪತ್ತೆ ಹಚ್ಚೋದು ಹೇಗೆ ಗೊತ್ತಾ?

ಶಂಕಿತನ ಸ್ಯಾಂಪಲ್ಸ್ ಸಂಗ್ರಹಿಸಿ ಲ್ಯಾಬ್​ , ಸೀಕ್ವೆನ್ಸ್​​​ಗೆ ಕಳುಹಿಸಿದಾಗ ಭಾಗಶಃ ವರದಿ ಸಿದ್ಧವಾಗುತ್ತದೆ ನಂತರ ವರದಿಯನ್ನು ಡಿಎನ್​ಎ ಲೈಬ್ರರಿ ಪ್ರಿಪರೇಷನ್​ಗೆ ಕಳುಹಿಸಲಾಗುತ್ತದೆ ಇದು ಎರಡು ದಿನಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ನಂತರ ಬಯೋ ಇನ್​ಫಾರ್​​ಮ್ಯಾಟಿಕ್​​ (bioinformatic) ಆಗಿರುವ ಕಂಪ್ಯೂಟರ್ ಅನಾಲಿಸಿಸ್​ಗೆ ಹೋಗಬೇಕು ನಂತರ ಅದು ಲಕ್ಷಾಂತರ ಜೀನ್​ಗಳನ್ನು ಪರಾಮರ್ಶಿಸುತ್ತದೆ ಕೊನೆಗೆ ಪ್ರೂಫ್ ರೀಡ್ ಮಾಡಿದ ಬಳಿಕವೇ ಒಮಿಕ್ರಾನ್ ಇದೆಯೋ ಇಲ್ವೋ ಎಂದು ಪತ್ತೆಹಚ್ಚಲಾಗುತ್ತದೆ.

ಜಿನೋಮ್ ಸೀಕ್ವೆನ್ಸಿಂಗ್​​ನಲ್ಲಿ ಒಮೈಕ್ರಾನ್ ಇದಿಯಾ ಇಲ್ವಾ ಎಂಬ ಬಗ್ಗೆ ತಿಳಿಯುತ್ತೆ ಹಾಗೂ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಮಾಡಿದ್ರೆ ಮಾತ್ರ ಪತ್ತೆಯಾಗುತ್ತೆ ಒಮೈಕ್ರಾನ್.ಈಪ್ರೋಸೆಸ್ಗೆ ಸಮಯವೂ ಜಾಸ್ತಿ, ಕೆಲಸವೂ ಜಾಸ್ತಿ ಇರುವುದರಿಂದ

ಹೆಚ್ಚೆಚ್ಚು ಕೇಸ್ ಬಂದ್ರೆ ನಮ್ಮ ಲ್ಯಾಬ್ಗಳಲ್ಲಿ ನಿರ್ವಹಣೆ ತೀರಾ ಕಷ್ಟಕರವಾಗಲಿದೆ ಎಂಬುವುದು ವೈದ್ಯರ ಅಭಿಪ್ರಾಯ.

Edited By : Nagesh Gaonkar
PublicNext

PublicNext

10/12/2021 03:17 pm

Cinque Terre

33.35 K

Cinque Terre

2

ಸಂಬಂಧಿತ ಸುದ್ದಿ