ತಮಿಳುನಾಡು: ತಮಿಳು ನಾಡು ಸರ್ಕಾರ ಫುಲ್ ಅಲರ್ಟ್ ಆಗಿದೆ. ಜನತೆಗೆ ಒಂದು ವಾರದ ಗಡುವನ್ನೂ ಕೊಟ್ಟಿದೆ.ಮುಂದಿನ ಒಂದು ವಾರದಲ್ಲಿ ಒಂದೇ ಒಂದು ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇದ್ದರೇ, ಅಂತವರಿಗೆ ಹೋಟೆಲ್,ಮಾಲ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ಇರೋದಿಲ್ಲ ಅಂತಲೇ ಎಚ್ಚರಿಕೆ ನೀಡಿದೆ.
ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದೆ. ಜನರಲ್ಲಿ ಇದರ ಬಗ್ಗೆ ಆತಂಕವೂ ದಿನೇ ದಿನೇ ಹೆಚ್ಚುತ್ತಿದೆ.ಅದಕ್ಕೇನೆ ತಮಿಳು ನಾಡು ಸರ್ಕಾರ ಈಗಲೇ ಒಂದ್ ಪ್ಲಾನ್ ಮಾಡಿದೆ. ಯಾರು ಇಲ್ಲಿವರೆಗೂ ಲಸಿಕೆ ಹಾಕಿಸಿಕೊಂಡಿಲ್ಲವೋ ಅವರು ವಾರದೊಳಗೆ ವ್ಯಾಕ್ಸಿನ್ ಹಾಕಿಸಿಕೊಂಡು ಬಿಡಿ. ಇಲ್ವಾದರೆ ಹೋಟೆಲ್,ಮಾಲ್ ಮತ್ತು ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಅವಕಾಶ ಕೊಡೋದಿಲ್ಲ ಅಂತಲೇ ಮಧುರೈ ಜಿಲ್ಲಾಧಿಕಾರಿ ಅನೀಶ್ ಶೇಖರ್ ತಿಳಿಸಿದ್ದಾರೆ.
PublicNext
04/12/2021 11:41 am