ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಕ್ಟೋರಿಯಾ ಕ್ಯಾಂಪಸ್‌ವರೆಗೂ ಹಬ್ಬಿದ ಒಮಿಕ್ರಾನ್ ವೈರಸ್ ಭೀತಿ

ಬೆಂಗಳೂರು: ನಗರದ ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಕಣ್ಣಿನ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೈದ್ಯರಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ. ಸೋಂಕಿತ ವೈದ್ಯ ಆರ್‌ಬಿಐ ಲೇಔಟ್ ನಿವಾಸಿಯಾಗಿದ್ದಾರೆ.

ಇವರು ಸುಮಾರು 46 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕಿತ ವೈದ್ಯರ ಪತ್ನಿಯಲ್ಲಿ ಕೂಡ ಪಾಸಿಟಿವ್ ಕಂಡು ಬಂದಿದ್ದು ಪತ್ನಿಯ ಸ್ಯಾಂಪಲ್‌ ಕೂಡ ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ.

ಸೋಂಕಿತ ವೈದ್ಯರು ಕಣ್ಣಿನ ವೈದ್ಯರಾಗಿರೋದ್ರಿಂದ ರೋಗಿಗಳ ಜೊತೆ ಕ್ಲೋಸ್‌ ಕಾಂಟ್ಯಾಕ್ಟ್ ಉಂಟಾಗಿರುತ್ತೆ. ಹೀಗಾಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನ ಟೆಸ್ಟ್ ಗೆ ಒಳಪಡಿಸಲಾಗಿದೆ. ಸದ್ಯ ಒಮಿಕ್ರಾನ್ ಸೋಂಕಿತ ವೈದ್ಯ ಹಾಗೂ ಪತ್ನಿಯನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಮಿಕ್ರಾನ್ ಸೋಂಕಿತ ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿ ವಾಸವಿದ್ದಾರೆ.‌ ಉಳಿದ 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ, ಹೀಗಾಗಿ 8 ಮಂದಿಯನ್ನ ಹೋಮ್ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ವೈದ್ಯರ ಮನೆಯನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ ಮನೆ ಹಾಗೂ ರಸ್ತೆಯನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ.

100 ಮೀಟರ್ ರಸ್ತೆಯನ್ನು ಬ್ಯಾರಿಕೇಡ್ , ರೆಡ್ ಟೇಪ್ ಹಾಕಿ ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಬ್ಯಾನರ್ ಕೂಡ ಹಾಕಲಾಗಿದೆ. ಸೋಂಕಿತ ವ್ಯಕ್ತಿಯ ಅಕ್ಕಪಕ್ಕದವರನ್ನು ಕೂಡ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿದೆ. ಸುಮಾರು 32 ಜನರ ಸ್ಯಾಂಪಲ್ಸ್ ಅನ್ನು ಬಿಬಿಎಂಪಿ ಸಂಗ್ರಹಿಸಿದ್ದು ಇಂದು ಎಲ್ಲರ ವರದಿ ಬರಲಿದೆ.

Edited By : Nagaraj Tulugeri
PublicNext

PublicNext

03/12/2021 12:13 pm

Cinque Terre

24.22 K

Cinque Terre

0