ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಮುಂಚೆಯೂ 'ಓಮಿಕ್ರಾನ್' ಕರ್ನಾಟಕದಲ್ಲಿ ಇದ್ದಿರಬಹುದು ಎಂದ ತಜ್ಞರು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಾಣು ಕಾಣಿಸಿಕೊಂಡಾಗಿದೆ. ಆದರೆ ಇದಕ್ಕೂ ಮುನ್ನ ಈ ವೈರಾಣು ಇತ್ತು ಎಂಬುದು ತಜ್ಞರ ಗುಮಾನಿ. ಕಾರಣ, ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿರದ ವೈದ್ಯರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಓಮಿಕ್ರಾನ್ ಸೋಂಕು ತಗುಲಿರುವ 46 ವರ್ಷದ ಅರಿವಳಿಕೆ ತಜ್ಞ ವೈದ್ಯ ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಹೃದ್ರೋಗ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು ಮರುದಿನ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಈ ವೈದ್ಯರ ಸೋಂಕಿನ ಪ್ರಾಥಮಿಕ ಮೂಲವು ಸಮ್ಮೇಳನದಲ್ಲಿರುವ ಯಾರೋ ಒಬ್ಬರಿಂದ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಅವರು ಸಮ್ಮೇಳನದಲ್ಲಿ ಭಾಗವಹಿಸಿದ ಕೇವಲ ಒಂದು ದಿನದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

03/12/2021 08:40 am

Cinque Terre

41.82 K

Cinque Terre

4