ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದ. ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ 10 ಮಂದಿ ಇನ್ನೂ ನಾಪತ್ತೆ!

ವರದಿ: ಗಣೇಶ್ ಹೆಗಡೆ

ಬೆಂಗಳೂರು: 'ಒಮಿಕ್ರಾನ್' ಭೀತಿ ಎಲ್ಲೆಡೆ ವ್ಯಾಪಿಸಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾದಿಂದ ಬಂದ 30 ಜನರಲ್ಲಿ 10 ಪ್ರಯಾಣಿಕರ ಪತ್ತೆ ಕಾರ್ಯ ಇನ್ನೂ ಆಗಿಲ್ಲ.‌

ವಿದೇಶದಿಂದ ಬಂದ ಬಹುತೇಕರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಮತ್ತಷ್ಟು ಆತಂಕ ಹೆಚ್ಚಲು ಕಾರಣವಾಗಿದೆ. ಈಗಾಗಲೇ ಒಮಿಕ್ರಾನ್ ವೈರಸ್ ಸಾಕಷ್ಟು ಬೇಗ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಈ ನಡುವೆ ವಿದೇಶದಿಂದ ಬೆಂಗಳೂರಿಗೆ ಬಂದವರ ಪೈಕಿ 10 ಮಂದಿಯ ಸಂಪರ್ಕ ದೊರೆಯುತ್ತಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ.

ಈ ಬಗ್ಗೆ ಮಾಹಿತಿಯನ್ನು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರಲ್ಲಿ ಕೇಳಿದಾಗ 'ಒಮಿಕ್ರಾನ್' ಹೆಚ್ಚಿರುವ ದೇಶದಿಂದ ನಗರಕ್ಕೆ ಬಂದ 10 ಜನರ ಅಡ್ರೆಸ್ ಪತ್ತೆ ಮಾಡಲಾಗುತ್ತಿಲ್ಲ ಎಂದಿದ್ದಾರೆ.

Edited By : Vijay Kumar
PublicNext

PublicNext

02/12/2021 04:42 pm

Cinque Terre

44.37 K

Cinque Terre

4

ಸಂಬಂಧಿತ ಸುದ್ದಿ