ಯಾದಗಿರಿ: ಏ..ಯವ್ವಾ.. ನನಗೆ ವ್ಯಾಕ್ಸಿನ್ ಹಾಕಬ್ಯಾಡವ..ನನಗೆ ಏನಾದ್ರೂ ಆದ್ರೆ.. ಏನ್ಮಾಡೋದು.. ಹಿಂಗಂತಾ ವ್ಯಾಕ್ಸಿನ್ ಹಾಕಲು ಬಂದ ಜಿಲ್ಲಾಧಿಕಾರಿಗೆ ಮಹಿಳೆಯೊಬ್ಬರು ಅವಾಜ್ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಕರ್ನಾಳ ಗ್ರಾಮದಲ್ಲಿ ನಡೆದಿದೆ.
ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ತೆರಳಿದ್ದ ವೇಳೆ ಅವರಿಗೆ ಅವಾಜ್ ಹಾಕಿದ ದೃಶ್ಯ ಕಂಡು ಬಂತು.
ಮಹಿಳೆಯ ಅವಾಜ್ ಗೆ ಒಂದು ಕ್ಷಣ ಡಿಸಿ ದಂಗಾಗಿ ಹೋಗಿದ್ದು, ಏನೆ ಆದ್ರು ವ್ಯಾಕ್ಸಿನ್ ತಗೊಳಲ್ಲ ಅಂತಾ ಮಹಿಳೆ ಪಟ್ಟು ಹಿಡಿದಿದ್ದಳು. ಕೊನೆಗೂ ಮಹಿಳೆ ಮನವೊಲಿಸಲು ಜಿಲ್ಲಾಧಿಕಾರಿಯೇ ವಿಫಲವಾರು.
ನಾವು ಮಾಡು ಅಂದ್ರೆ ಮಾಡಿ ಇಲ್ಲವಾದ್ರೆ ನಮಗೆ ಬೇಡ ಎಂದ ಮಹಿಳೆಗೆ ಜಿಲ್ಲಾಧಿಕಾರಿ ಹಾಗೂ ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಕೂಡ ಎಷ್ಟೇ ಮನವೋಲಿಸಿದರು ಆ ಮಹಿಳೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು.
ಅದೆಷ್ಟೋ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದೆ ಬರ್ತಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಕೆಲ ಜನರು ಹಿಂಜರಿಯುತ್ತಿರೋದರಿಂದ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.
---------
ವರದಿ: ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
01/12/2021 10:59 am