ಇಂದೋರ್(ಮಧ್ಯ ಪ್ರದೇಶ): ಭಾರತ ರತ್ನ ಪ್ರಶಸ್ತಿಗಿಂತಲೂ ವಿ. ಡಿ ಸಾವರ್ಕರ್ ವ್ಯಕ್ತಿತ್ವ ದೊಡ್ಡದು ಎಂದು ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಾಹುರ್ ಕರ್ ಹೇಳಿದ್ದಾರೆ.
ಇಂದೋರ್ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭ ಮಾತನಾಡಿದ ಅವರು, ಭಾರತದಲ್ಲಿ ಸಾವರ್ಕರ್ ಯುಗ ಆರಂಭವಾಗಿದೆ ಎಂದು ಬಣ್ಣಿಸಿದ್ದಾರೆ. ಸಾವರ್ಕರ್ ಗೆ ಭಾರತ ರತ್ನ ಸಿಕ್ಕರೆ ಉತ್ತಮ. ಒಂದು ವೇಳೆ ಅದು ಸಿಗದೇ ಇದ್ದರೂ ಅವರ ವ್ಯಕ್ತಿತ್ವ ಅದಕ್ಕಿಂತಲೂ ಮಿಗಿಲಾಗಿರುತ್ತದೆ ಎಂದಿದ್ದಾರೆ.
PublicNext
28/11/2021 10:28 pm