ದೇವನಹಳ್ಳಿ: ಕೊರೊನಾ ರೂಪಾಂತರಿ 'ಒಮಿಕ್ರಾನ್' ವೈರಸ್ ಆತಂಕದ ನಡುವೆಯೂ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು ಮೈಮರೆತು ಓಡಾಡುತ್ತಿದ್ದಾರೆ!
ಒಮಿಕ್ರಾನ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರ್ಕಾರದ ಗೈಡ್ ಲೈನ್ ನಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಪ್ರಯಾಣಿಕರು ಮಾತ್ರ ವೈರಸ್ ಯಾವುದೇ ಭಯ ಇಲ್ಲದೆ ಮೈಮರೆತಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಇಲ್ಲದೆ ಗುಂಪು ಗುಂಪಾಗಿ ಜಮಾಯಿಸುತ್ತಿದ್ದಾರೆ. ದೇಶ- ವಿದೇಶಗಳಿಂದ ಬರುವ ಪ್ರಯಾಣಿಕರ ಜೊತೆಯೂ ಗುಂಪಾಗಿ ಜಮಾವಣೆ, ಏರ್ ಪೋರ್ಟ್ ನ ಆಗಮನ- ನಿರ್ಗಮನ ದ್ವಾರದ ಬಳಿಯಲ್ಲೂ ಪ್ರಯಾಣಿಕರ ನಿರ್ಲಕ್ಷ್ಯತೆ ಆತಂಕವನ್ನುಂಟು ಮಾಡಿದೆ.
PublicNext
28/11/2021 02:10 pm