ಮೈಸೂರು: ಒಂದು ವಾರದ ಅವಧಿಯಲ್ಲಿ ಮೈಸೂರಿನ ಕಾವೇರಿ ನರ್ಸಿಂಗ್ ಕಾಲೇಜು ಮತ್ತು ಸೇಂಟ್ ಜೋಸೆಫ್ಸ್ ನರ್ಸಿಂಗ್ ಕಾಲೇಜುಗಳ 64 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, 'ನವೆಂಬರ್ 16ರಿಂದ 22ರ ವರೆಗಿನ ಅವಧಿಯಲ್ಲಿ 64 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿದೆ. ಮತ್ತಷ್ಟು ಮಂದಿಗೆ ಹರಡದಂತೆ ಮುಂಜಾಗ್ರತೆ ವಹಿಸಿದ್ದೇವೆ. ಕರ್ನಾಟಕ -ಕೇರಳ ಗಡಿಪ್ರದೇಶದ ಚೆಕ್ ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜಿಸಿ ನಿಗಾ ಇಡಲಾಗಿದೆ' ಎಂದು ಹೇಳಿದರು.
PublicNext
28/11/2021 10:44 am