ನವದೆಹಲಿ: ಓಮಿಕ್ರಾನ್ ಹೆಸರಿನ ರೂಪಾಂತರಿ ಕೊರೊನಾ ತುಂಬ ಅಪಾಯಕಾರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಓಮಿಕ್ರಾನ್ ಆತಂಕಕಾರಿಯಾಗಿದ್ದು, ದೇಶದ ಜನರಿಗೆ ಲಸಿಕೆ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ. ಹೊಸ ರೂಪಾಂತರವು ಅಪಾಯಕಾರಿಯಾಗಿದೆ. ದೇಶದ ಜನರಿಗೆ ಕೋವಿಡ್ ಲಸಿಕೆಯ ಭದ್ರತೆ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರವಾಗಬೇಕು. ಇದು ತುಂಬಾ ಮಹತ್ವದ ಸಮಯವಾಗಿದೆ. ಲಸಿಕೆ ಹಂಚಿಕೆಯ ಬಗೆಗಿನ ಅಂಕಿ ಅಂಶಗಳ ಕುರಿತು ವಾಗ್ದಾಳಿ ನಡೆಸಿರುವ ಅವರು, ಒಬ್ಬ ವ್ಯಕ್ತಿಯ ಫೋಟೋದ ಹಿಂದೆ ಈ ಅಂಕಿ-ಅಂಶಗಳನ್ನು ಹೆಚ್ಚು ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
PublicNext
27/11/2021 07:35 pm