ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾದ ಹೊಸ ರೂಪಾಂತರಿ ತಳಿ B.1.1529 (ಒಮಿಕ್ರಾನ್) ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ ಹೊಸ ತಳಿ ಯಿಂದ ಸದ್ಯಕ್ಕೆ ನಮ್ಮ ರಾಜ್ಯಕ್ಕೆ ಯಾವುದೇ ಆತಂಕ ಇಲ್ಲ. ಹಾಗಂತ ನಿರ್ಲಕ್ಷ್ಯವನ್ನೂ ಮಾಡುವಂತಿಲ್ಲ.
ಈಗಾಗಲೇ ಕಂಡುಬಂದಿರುವ ರೂಪಾಂತರ ತಳಿ ಡೆಲ್ಟಾ ವೈರಸ್‌ಗಿಂತ ಈಗ ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ 'ಒಮಿಕ್ರಾನ್' ಪರಿಣಾಮಕಾರಿಯೇ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಒಮಿಕ್ರಾನ್ ಬಹಳ ಬೇಗ ಹರಡುತ್ತದೆ ಎಂದು ಹೇಳಲಾಗಿದೆ. ಆದರೆ, ಇದರ ಲಕ್ಷಣ ಬಗ್ಗೆ ಸಂಪೂರ್ಣ ವರದಿ ಬಂದಿಲ್ಲ ಎಂದರು.
ಕೇಂದ್ರ ಸರ್ಕಾರವೂ ಸಹ ಈ ಬಗ್ಗೆ ಚರ್ಚಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಬಹುದು. ಅದರಂತೆ ರಾಜ್ಯದಲ್ಲಿ ಮತ್ತೆ ಬದಲಾವಣೆ ಮಾಡಲಾಗುವುದೆಂದು ಸಚಿವ ಸುಧಾಕರ್ ತಿಳಿಸಿದರು.
ಧಾರವಾಡದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾಗಿರುವುದು, ಬೆಂಗಳೂರಿನ ಬೊಮ್ಮಸಂದ್ರ ಶಾಲೆ, ಮೈಸೂರಿ ನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಇರುವುದು ಪತ್ತೆಯಾಗಿದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ.
ಆದರೆ, ಯಾವ ವಿದ್ಯಾರ್ಥಿಗಳಲ್ಲಿಯೂ ಗಂಭೀರ ಆರೋಗ್ಯ ಸಮಸ್ಯೆ ಗಳಿಲ್ಲ ಎಂಬುದು ಸಮಾಧಾನದ ವಿಷಯ. ಈ ಬಗ್ಗೆ ನಿಗಾ ವಹಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೈಟ್ : ಡಾ.ಕೆ. ಸುಧಾಕರ್, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
PublicNext
27/11/2021 03:39 pm