ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿನ್ನೆಗಿಂತ ಹೆಚ್ಚಾದ ಕೊರೊನಾ: ಇಂದು 478 ಜನರಿಗೆ ಸೋಂಕು, 17 ಜನ ಸಾವು

ಬೆಂಗಳೂರು: ಮತ್ತೆ ಕೋವಿಡ್ ಭೀತಿ ಆವರಿಸುವಂತೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 478 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೂ 17 ಮೃತಪಟ್ಟಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈವರೆಗೂ 29,87,313 ಜನರಿಗೆ ಸೋಂಕು ತಗುಲಿದ್ದು, 38,054 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 334 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,40,673 ಕ್ಕೆ ಏರಿಕೆಯಾಗಿದೆ. ಇನ್ನು 8,557 ಸಕ್ರಿಯ ಪ್ರಕರಣಗಳಿವೆ. ಹಾಗೂ ಕಳೆದ 24 ಗಂಟೆಗಳಲ್ಲಿ ಕೋವಿಡ್ ಖಚಿತತೆಯ ಪ್ರಮಾಣ 0.42%ನಷ್ಟಿದೆ. ಮರಣ ಪ್ರಮಾಣ 3.55%ನಷ್ಟಿದೆ. ಇದೇ ಅವಧಿಯಲ್ಲಿ 1,13,152 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬೆಂಗಳೂರು ನಗರ: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಓಟ ಮುಂದುವರಿದಿದೆ. ಇಂದು 235 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,51,390ಕ್ಕೆ ಏರಿಕೆಯಾಗಿದೆ. 161 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 12,28,630 ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು ಏಳು ಜನ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೂ ಒಟ್ಟು 16,266 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ 6,493 ಸಕ್ರಿಯ ಪ್ರಕರಣಗಳಿವೆ.

Edited By : Nagaraj Tulugeri
PublicNext

PublicNext

28/10/2021 07:15 pm

Cinque Terre

37.51 K

Cinque Terre

0