ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿನ ಕೊರೊನಾ ಅಪ್ಡೇಟ್: ಇಂದು 371 ಜನರಿಗೆ ಸೋಂಕು, 7 ಸಾವು

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ಮತ್ತೆ ತನ್ನ ಕಬಂಧಬಾಹುಗಳನ್ನು ಚಾಚುವಂತೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 371 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು,270 ಜನ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈವರೆಗೂ 29,85,598 ಜನರಿಗೆ ಸೋಂಕು ತಗುಲಿದ್ದು, 38002 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 342 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,38,653ಕ್ಕೆ ಏರಿಕೆಯಾಗಿದೆ. ಇನ್ನು 8,914 ಸಕ್ರಿಯ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಗಳಲ್ಲಿ ಕೊರೊನಾ ಖಚಿತತೆಯ ಪ್ರಮಾಣ 0.30%ನಷ್ಟಿದೆ. ಹಾಗೂ ಮರಣ ಪ್ರಮಾಣ 1.88% ನಷ್ಟಿದೆ. ಮತ್ತು ಇದೇ ಅವಧಿಯಲ್ಲಿ 1,20,073 ಜನರನ್ನು ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬೆಂಗಳೂರು ನಗರ: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಓಟ ಇನ್ನೂ ನಿಂತಿಲ್ಲ. ಇಂದು 193 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,50,513ಕ್ಕೆ ಏರಿಕೆಯಾಗಿದೆ. 130 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 12,27,518 ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೂ ಒಟ್ಟು 16,240 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, 6,754 ಸಕ್ರಿಯ ಪ್ರಕರಣಗಳಿವೆ.

Edited By : Nagaraj Tulugeri
PublicNext

PublicNext

23/10/2021 07:05 pm

Cinque Terre

56.31 K

Cinque Terre

1

ಸಂಬಂಧಿತ ಸುದ್ದಿ