ಕೊಪ್ಪಳ: ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ವೃದ್ಧೆಯೊಬ್ಬರು ರಂಪಾಟ ನಡೆಸಿದರಿಂದ ಆಕೆಯ ಕಣ್ಣು ಮುಚ್ಚಿ, ಕೈ-ಕಾಲು ಹಿಡಿದು ಲಸಿಕೆಯನ್ನು ಆರೋಗ್ಯ ಸಿಬ್ಬಂದಿ ಹಾಕಿರುವ ಘಟನೆ ತಾಲೂಕಿನ ಲೇಬಗೇರ ಗ್ರಾಮದಲ್ಲಿ ನಡೆದಿದೆ
ಆರೋಗ್ಯ ಸಿಬ್ಬಂದಿಗೆ ಸ್ಥಳೀಯರು ಸಾಥ್ ನೀಡಿ ದ್ಯಾಮಮ್ಮ ಕಂಠಿ ಎಂಬ ಅಜ್ಜಿಗೆ ಎರಡನೇ ಡೋಸ್ ಲಸಿಕೆ ಹಾಕಿಸಿದ್ದಾರೆ.
ದೇಶದಲ್ಲಿ 100 ಕೋಟಿ ಕೋವಿಡ್ ಲಸಿಕೆ ಗುರಿ ಮುಟ್ಟಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಲಸಿಕಾ ಮೇಳ ಆಯೋಜನೆ ಮಾಡಲಾಗಿತ್ತು. ಈ ಮೇಳದಲ್ಲಿ 60 ಸಾವಿರ ಡೋಸ್ ಕೊರೋನಾ ಲಸಿಕೆ ಹಾಕುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ
PublicNext
22/10/2021 05:47 pm