ನವದೆಹಲಿ: ದೇಶದಾದ್ಯಂತ ಭಾನುವಾರದವರೆಗೆ 95 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 'ಭಾರತವು 100 ಕೋಟಿ ಕೊವಿಡ್ -19 ಲಸಿಕೆಗಳನ್ನು ನೀಡಲು ಹತ್ತಿರವಾಗಿದೆ' ಎಂದು ತಿಳಿಸಿದ್ದಾರೆ.
Co-WIN ಪೋರ್ಟಲ್‌ನಲ್ಲಿನ ಅಂಕಿ-ಅಂಶದ ಪ್ರಕಾರ, ಭಾನುವಾರ ಒಂದೇ ದಿನ ಸಂಜೆ 7ರ ವರೆಗೆ ಒಟ್ಟು 44 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ದೇಶದಾದ್ಯಂತ ಜನವರಿ 16ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು. ಫೆಬ್ರುವರಿ 2ರ ಬಳಿಕ ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗಿತ್ತು.
ಮಾರ್ಚ್ 1ರಿಂದ ಮೂರನೇ ಹಂತದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಏಪ್ರಿಲ್ 1ರ ಬಳಿಕ 45 ವರ್ಷ ಮೇಲಿನವರಿಗೆ ಲಸಿಕೆ ವಿತರಿಸಲಾಯಿತು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರವು ಅಭಿಯಾನವನ್ನು ವಿಸ್ತರಿಸಿತ್ತು.
PublicNext
10/10/2021 10:53 pm