ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾಟ ಇನ್ನೂ ತಪ್ಪುತ್ತಿಲ್ಲ. ಆದ್ರೆ ನಿನ್ನೆಗಿಂತ ಇಂದು ಕೊಂಚ ಮಟ್ಟಿಗೆ ಕೊರೊನಾ ಹಾವಳಿ ತಗ್ಗಿದೆ. ಕಳೆದ 24 ಗಂಟೆಯಲ್ಲಿ 523 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಹಾಗೂ 14 ಜನ ಮೃತಪಟ್ಟಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೂ 29,78,808 ಜನರಿಗೆ ಸೋಂಕು ತಗುಲಿದೆ. ಹಾಗೂ 37,845 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 575 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,29,008 ಕ್ಕೆ ಏರಿಕೆಯಾಗಿದೆ. ಇನ್ನು 11,926 ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಕರಣ 0.59%ನಷ್ಟಿದೆ. ಹಾಗೂ ಮರಣ ಪ್ರಮಾಣ 2.67% ನಷ್ಟಿದೆ. 87,303 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಬೆಂಗಳೂರು ನಗರ: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಈಗಲೂ ಹರಿದಾಡುತ್ತಿದೆ. ಇಂದು 201 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,47,459 ಕ್ಕೆ ಏರಿಕೆಯಾಗಿದೆ. 238 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 12,23,686ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು 4 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈವೆರಗೂ ಒಟ್ಟು 16,173 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ 7,599 ಸಕ್ರಿಯ ಪ್ರಕರಣಗಳಿವೆ.
PublicNext
05/10/2021 07:31 pm