ಬೆಂಗಳೂರು : ಆನೇಕಲ್ ತಾಲೂಕಿನ ಸಿಂಗೇನಹಾರ ಬಳಿಯ ಚೈತನ್ಯ ಇಂಟರ್ನ್ಯಾಷನಲ್ ಶಾಲೆಯ ಒಟ್ಟು 54 ವಿದ್ಯಾರ್ಥಿಗಳಿಗೆ ಇಂದು (ಸೆಪ್ಟೆಂಬರ್ 28) ಕೊರೊನಾ ಸೋಂಕು ದೃಢವಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಕಂಡುಬಂದಿದೆ. ಕೊವಿಡ್19 ಸೋಂಕು ದೃಢಪಟ್ಟಿರುವ 54 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಸ್ಫೋಟಗೊಂಡ ಹಿನ್ನೆಲೆ ಕಾಲೇಜ್ ಬಂದ್ ಮಾಡಲಾಗಿದೆ. ಕಾಲೇಜು ಮಂಡಳಿ ಎಲ್ಲಾ ತರಗತಿಗಳನ್ನು ಮೊಟಕುಗೊಳಿಸಿದೆ. ಒಟ್ಟು 335 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳು ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಕರ್ನಾಟಕದವರು ಆಗಿದ್ದಾರೆ. ಎಂಟು ವಿದ್ಯಾರ್ಥಿಗಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.
PublicNext
28/09/2021 04:27 pm