ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಸಿಕೆ ವಿತರಣೆಯಲ್ಲಿ ಬೆಂಗಳೂರು ದೇಶದಲ್ಲೇ ಫಸ್ಟ್

ಬೆಂಗಳೂರು: ಲಸಿಕೆ ವಿತರಣೆಯಲ್ಲಿ ಬೆಂಗಳೂರು ಮಹಾನಗರ ಇಡೀ ದೇಶಕ್ಕೆ ನಂಬರ್ ಒನ್ ಸ್ಥಾನ ಪಡೆದಿದೆ. ಶುಕ್ರವಾರ ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 70,936 ಲಸಿಕೆ ನೀಡಲಾಗಿದೆ.

ಲಸಿಕಾಕರಣದಲ್ಲಿ ದೇಶದ ನಗರಗಳ ಪೈಕಿ ಬಿಬಿಎಂಪಿ ಪ್ರಥಮ ಸ್ಥಾನದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 84,280 ಮಂದಿಗೆ ಲಸಿಕೆ ನೀಡಿರುವ ದಕ್ಷಿಣ ವಲಯ ಅತೀ ಹೆಚ್ಚು ಲಸಿಕಾಕರಣ ಮಾಡಿದ ವಲಯವಾಗಿ ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ 75,874 ಮಂದಿ ಲಸಿಕೆ ಪಡೆದಿರುವ ಪಶ್ಚಿಮ ವಲಯವಿದೆ. ಕೊನೆಯ ಸ್ಥಾನದಲ್ಲಿ 22,834 ಮಂದಿಗೆ ಲಸಿಕೆ ನೀಡಿರುವ ಯಲಹಂಕ ವಲಯ ಇದೆ.

ಎಂಟು ವಲಯಗಳ 2,187 ಲಸಿಕಾ ಕೇಂದ್ರಗಳಲ್ಲಿ 3,76,906 ಕೋವಿಶೀಲ್ಡ್ ಮತ್ತು 29,603 ಕೋವ್ಯಾಕ್ಸಿನ್ ಡೋಸ್‍ಗಳನ್ನು ನೀಡಲಾಗಿದೆ. ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 3,69,469 ಮಂದಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ 37,397 ಮಂದಿ ಲಸಿಕೆ ಪಡೆದಿದ್ದು, ಸ್ಪುಟ್ನಿಕ್ ಲಸಿಕೆಯನ್ನು 357 ಮಂದಿಗೆ ಕೊಡಲಾಗಿದೆ.

Edited By : Nagaraj Tulugeri
PublicNext

PublicNext

18/09/2021 11:14 am

Cinque Terre

63.08 K

Cinque Terre

0