ಫ್ಲೋರಿಡಾ(ಅಮೆರಿಕ): ಕೊರೊನಾ ಕಾಲಘಟ್ಟದಲ್ಲಿ ಜೀವ ಉಳಿಸಿಕೊಂಡರೆ ಸಾಕಪ್ಪ ಎಂಬ ಸ್ಥಿತಿಯಲ್ಲಿ ಜನರಿದ್ದಾರೆ. ಆದ್ರೆ ಇಲ್ಲೊಂದು ಜೋಡಿ ವಿಮಾನದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿ ಸಿಬ್ಬಂದಿಗಳಿಂದ ಹೊರ ಹಾಕಲ್ಪಟ್ಟಿದ್ದಾರೆ. ಈ ವಿಮಾನ ಫ್ಲೋರಿಡಾ ಫೋರ್ಟ್ ಲಾಡರ್‌ನಿಂದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದತ್ತ ಹೊರಡಬೇಕಿತ್ತು. ಈ ವೀಡಿಯೋವನ್ನು ಆಲಿಸ್ ರುಸೋ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ವೇಳೆ ಆ ದಂಪತಿ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಮಹಿಳೆ ತನ್ನ ಮಗುವಿನೊಂದಿಗೆ ವಿಮಾನದಲ್ಲಿ ಕಾರಣವಲ್ಲದೇ ಅತ್ತಿಂದಿತ್ತ ಓಡಾಡುತ್ತಿದ್ದಳು. ಸಿಬ್ಬಂದಿ ಹೇಳಿದರು ಈ ದಂಪತಿ ಮೂಗಿನಿಂದ ಕೆಳಗೆ ಮಾಸ್ಕ್ ಧರಿಸಿದ್ದರು ಎಂದು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಆಲಿಸ್ ರುಸೋ ಬರೆದಿದ್ದಾರೆ.
PublicNext
13/09/2021 03:32 pm