ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಲಸಿಕೆ ಸ್ಲಾಟ್ ಅನ್ನು ಗೂಗಲ್‌ನಲ್ಲಿಯೂ ಬುಕ್ ಮಾಡಬಹುದು

ನವದೆಹಲಿ: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನದಿಂದ ಹಿಡಿದು, ಇನ್ನೂ ಹಲವಾರು ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಕೊರೊನಾ‌ದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಲಸಿಕೆ ಪಡೆಯಲು ಗೂಗಲ್ ಮೂಲಕವೂ ಸ್ಲಾಟ್ ಬುಕ್ ಮಾಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಈಗಾಗಲೇ ಕೋವಿಡ್ ಸೇರಿದಂತೆ ಲಸಿಕೆ ಪಡೆಯಲು ನೋಂದಣಿಗಾಗಿ ಜನರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಉಪಕ್ರಮ‌ಗಳನ್ನು ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಇದೀಗ ಗೂಗಲ್ ಮೂಲಕವೂ ಸ್ಲಾಟ್ ಬುಕ್ ಮಾಡುವ ಅವಕಾಶ‌ವನ್ನು ಕೇಂದ್ರ ಸರ್ಕಾರ ಸಾರ್ವಜನಿಕ‌ರಿಗೆ ಒದಗಿಸಿದೆ.

ಈ ಬಗ್ಗೆ ಮನ್ಸುಖ್ ಮಾಂಡವಿಯಾ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದು, ಗೂಗಲ್‌ಗೆ ಭೇಟಿ ನೀಡಿ ಅದರಲ್ಲಿ ಕೋವಿಡ್ ವ್ಯಾಕ್ಸಿನ್ ನಿಯರ್ ಟು ಮಿ ಎಂದು ಸರ್ಚ್ ಮಾಡುವ ಮೂಲಕ, ನಿಮ್ಮ ಹತ್ತಿರದ ಲಸಿಕಾ ಕೇಂದ್ರ‌ದ ಮಾಹಿತಿ, ಅಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯಬಹುದು. ಹಾಗೆಯೇ ಸ್ಲಾಟ್ ಬುಕ್ ಮಾಡಲು ಅಲ್ಲಿರುವ ಅಪಾಯಿಂಟ್‌ಮೆಂಟ್ ಮೇಲೆ ಕ್ಲಿಕ್ ಮಾಡುವಂತೆಯೂ ಅವರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

02/09/2021 11:06 pm

Cinque Terre

32.56 K

Cinque Terre

2