ಬೆಂಗಳೂರು : ಹೆಮ್ಮಾರಿ ಕೊರೊನಾ ಇನ್ನು ಹೋಗಿಲ್ಲ ಅದು ಮತ್ತೆ ತಾನಿರು ಬಗ್ಗೆ ಎಚ್ಚರಿಸುತ್ತಿದೆ. ಹಾಗಾಗಿ ಕೋವಿಡ್ 3 ನೇ ಅಲೆ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಜನರಿಗೆ 72 ಗಂಟೆಗಳೊಳಗೆ ಪಡೆದ ನೆಗೆಟಿವ್ ಆರ್ ಟಿಪಿಸಿಆರ್ ವರದಿ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ವಿಮಾನ, ರೈಲು, ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು, ಕರೊನಾ ಲಸಿಕೆ ಪಡೆದಿದ್ದರೂ ಕೂಡ, ರಾಜ್ಯವನ್ನು ಪ್ರವೇಶಿಸುವ ಮುನ್ನ ನೆಗೆಟಿವ್ ವರದಿ ನೀಡಲೇಬೇಕಾಗಿದೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತನ್ನ ಗಡಿಗಳಲ್ಲಿ ಎಚ್ಚರ ವಹಿಸುವ ಕ್ರಮ ಕೈಗೊಂಡಿದೆ.
ಈ ರಾಜ್ಯಗಳ ಪ್ರಯಾಣಿಕರಿಗೆ ಟಿಕೇಟು ನೀಡುವ ಮುನ್ನ ನೆಗೆಟಿವ್ ವರದಿ ಇದೆಯೇ ಎಂದು ಪರಿಶೀಲಿಸಬೇಕು ಎಂದು ಸರ್ಕಾರ ಹೇಳಿದೆ.
ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ಪಕ್ಕ ಬರುವ ಬೆಳಗಾವಿ, ವಿಜಯಪುರ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
PublicNext
31/07/2021 04:51 pm