ರಾಜ್ಯದಲ್ಲಿ ರಣಕೇಕೆ ಹಾಕುತ್ತಿದೆ ಕೊರೊನಾ :ಇಂದು 17,489 ಜನರಿಗೆ ಸೋಂಕು, 80 ಬಲಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಅಬ್ಬರ ಜೋರಾಗಿದ್ದು,ಕಳೆದ 24 ಗಂಟೆಯಲ್ಲಿ 17,489 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 80 ಜನ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈವರೆಗೂ 1,19,160 ಜನರಿಗೆ ಸೋಂಕು ತಗುಲಿದ್ದು, 13,270 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 5,565 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10,09,549 ಕ್ಕೆ ಏರಿಕೆಯಾಗಿದೆ. ಇನ್ನು 1,19,160 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಓಟ ಮುಂದುವರಿದಿದ್ದು, ಇಂದು 11,404 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,33,842ಕ್ಕೆ ಏರಿಕೆಯಾಗಿದೆ. 3,253 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,41,054 ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಇಂದು 43 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈವೆರಗೂ ಒಟ್ಟು 5063 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, 87,724 ಸಕ್ರಿಯ ಪ್ರಕರಣಗಳಿವೆ.

Public News

Public News

23 days ago

Cinque Terre

77.54 K

Cinque Terre

9

 • Shivanand GK Shivu
  Shivanand GK Shivu

  Go Corona Go.... Hahahaha

 • C M Karadigudda
  C M Karadigudda

  what about Belgavi district today corona cases

 • Santosh Meharwade
  Santosh Meharwade

  Rahul, ಇನ್ನೊಬ್ಬರನ್ನು ನೋವನ್ನು ಜನರು ಅರ್ಥಮಾಡಿಕೊಳ್ಳಬೇಕು ಕರೋನಾ ಎಂಬುದು ಶುದ್ಧ ಸುಳ್ಳು ಎನ್ನುವವರ ಉಡಾಫೆ ಉತ್ತರದಿಂದ ಇಂದು ರಾಜ್ಯ ತತ್ತರಿಸಿಹೋಗಿದೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ

 • Rahul
  Rahul

  Santosh Meharwade, ಸಂತೋಷ್ ... ಇನ್ನೊಬ್ಬರ ಬಗ್ಗೆ ಒಳ್ಳೇದನ್ನು ಬಯಸಿಲ್ಲ ಅಂದ್ರು ಕೆಟ್ಟದ್ದನ್ನು ಬಯಸಬಾರದು...ನೀವು ವೈರಸ್ ನ ಭೀಕರತೆ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸಿ ..ಅದು ಬಿಟ್ಟು ..

 • capital securities
  capital securities

  dharwad district plz

 • C M Karadigudda
  C M Karadigudda

  what about Dharwad district today

 • Kishore Anvekar
  Kishore Anvekar

  It is mutated virus by passing nose and mouth and is spreading via air media.It may attack isolated rooms through air and mask one has to wear to safeguard as there is less chances of getting infected in open air.

 • Santosh Meharwade
  Santosh Meharwade

  ಜನರು ಕರೋನ ಬಗ್ಗೆ ಇನ್ನೂ ಹಗುರವಾಗಿ ಪರಿಗಣಿಸಿದ್ದಾರೆ ಯಾವಾಗ ಈ ವೈರಸ್ ಅವರ ಕುಟುಂಬಕ್ಕೆ ಒಕ್ಕರಿಸು ತೋರಿಸುತ್ತದೆ ಆವಾಗ ಅವರಿಗೆ ಆ ವೈರಸ್ ನ ಪ್ರಭಾವ ಹಾಗೂ ಭೀಕರತೆ ಗೊತ್ತಾಗುತ್ತದೆ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ ಅವರು ಎಚ್ಚರವಾಗು ವರೆಗೆ ವೈರಸ್ ತನ್ನ ಅಟ್ಟಹಾಸವನ್ನು ಮೆರೆದು ಯಮ ರೂಪಿಯಾಗಿ ಕಾಡತೊಡಗುತ್ತದೆ

 • Mallanagouda hatti patil
  Mallanagouda hatti patil

  ಸರ ಜೃರ ಬಂದರು ಕಾರಣ ಅಂತ ಹೇಳುತೃರ ಎಕೆ ಮನಷನಿಗೆ ಜೃರ ಬರುವದು ಸಹಜ ಇದು ಸರಕಾರ ಮಾಡುವ ಮೊಸ