ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೋ ವ್ಯಾಕ್ಸಿನ್..ನೋ ಸ್ಯಾಲರಿ.. ಗೂಗಲ್ ದೃಢ ನಿರ್ಧಾರ

ವಾಷಿಂಗ್ಟನ್ : ಜಗತ್ತಿನಲ್ಲಿ ಕೋವಿಡ್ ಸೃಷ್ಟಿಸಿದ ಸಮಸ್ಯೆಗಳು ಒಂದೆರಡಲ್ಲ. ಇದರ ಮಧ್ಯೆ ಒಮಿಕ್ರಾನ್ ಎಂಬ ರೂಪಾಂತರಿ ವೈರಸ್ ಭೀತಿ. ಇದೆಲ್ಲದರ ಮಧ್ಯೆ ಕೋವಿಡ್ ಲಸಿಕೆ ನೀಡುವುದು ಒಂದು ಸರ್ಕಸ್ ಆಗಿದೆ. ಜನ ಒಂದು ಡೋಸ್ ಪಡೆದರೆ ಮತ್ತೊಂದು ಡೋಸ್ ಪಡೆದಿಲ್ಲ. ಇನ್ನೂ ಕೆಲವರಂತೂ ಒಂದೂ ಡೋಸ್ ಪಡೆದಿಲ್ಲ.

ಸದ್ಯ ಸಂಪೂರ್ಣ ಲಸಿಕೆಗಾಗಿ ಗೂಗಲ್ ರೂಲ್ಸ್ ವೊಂದನ್ನಾ ಜಾರಿ ಮಾಡಿದೆ. ಹೌದು ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾ ಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಹೌದು, ಗೂಗಲ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 3ರ ಒಳಗಾಗಿ ತಮ್ಮ ಲಸಿಕೆಗಳ ವಿವರವನ್ನು ಸಲ್ಲಿಸ ಬೇಕೆಂಬ ಸೂಚನೆ ನೀಡಿತ್ತು.

ಇದೀಗ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಜನವರಿ 18ರ ವರೆಗೆ ಸಮಯಾವಕಾಶ ನೀಡಿದೆ. ಉದ್ಯೋಗಿಗಳು ಲಸಿಕೆಯನ್ನು ಪಡೆಯದೇ ಹೋದಲ್ಲಿ ಅವರಿಗೆ ವೇತನದೊಂದಿಗೆ 30 ದಿನಗಳ ರಜೆಯನ್ನು ನೀಡಲಾಗುವುದು, ನಂತರ 6 ತಿಂಗಳ ವರೆಗೆ ವೇತನವಿಲ್ಲದ ವೈಯಕ್ತಿಕ ರಜೆಯಲ್ಲಿ ಇರಿಸಲಾಗುತ್ತದೆ ಎಂದಿದೆ.

ಒಂದುವೇಳೆ ಈ ಸಮಯಾವಕಾಶದಲ್ಲಿಯೂ ಉದ್ಯೋಗಿಗಳು ಲಸಿಕೆಯನ್ನು ತೆಗೆದುಕೊಂಡಿಲ್ಲವಾದಲ್ಲಿ ಕೆಲಸದಿಂದಲೇ ಅವರನ್ನು ವಜಾ ಗೊಳಿಸುವುದಾಗಿ ತಿಳಿಸಿದೆ.

Edited By : Nirmala Aralikatti
PublicNext

PublicNext

16/12/2021 05:32 pm

Cinque Terre

45.49 K

Cinque Terre

0