ಬೆಂಗಳೂರು: ಬೆಂಗಳೂರಿನ ವೇಕ್ ಫಿಟ್ ಸಲ್ಯೂಷನ್ ಎನ್ನುವ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 30 ನಿಮಿಷ ನಿದ್ರಾ ವಿರಾಮ ನೀಡುವ ಮೂಲಕ ಸುದ್ದಿಯಾಗಿದೆ. ಸಾಮಾನ್ಯವಾಗಿ ಕರ್ತವ್ಯದ ಅವಧಿಯಲ್ಲಿ ಯಾರಾದರೂ ನಿದ್ರಿಸಿದರೆ ಕೆಲಸಕ್ಕೆ ಕುತ್ತು ಬರುತ್ತದೆ ಎನ್ನುವವರ ಮಧ್ಯೆ ಈ ಕಂಪನಿ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಈ ವಿನೂತನ ಯೋಜನೆಯನ್ನು ಅಳವಡಿಸಿಕೊಂಡಿದೆ.
ಟ್ವಿಟರ್ ನಲ್ಲಿ ವಿವರಣೆಯುಳ್ಳು ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ನಿದ್ರಾ ವಿರಾಮ ಯೋಜನೆಯನ್ನು ಘೋಷಣೆ ಮಾಡಿದೆ.
ಪೋಸ್ಟ್ ಪ್ರಕಾರ, ವೇಕ್ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಇತ್ತೀಚೆಗೆ ಸಹೋದ್ಯೋಗಿಗಳಿಗೆ ಆಂತರಿಕ ಇಮೇಲ್ ಕಳುಹಿಸಿದ್ದಾರೆ. ಅದರಲ್ಲಿ ಉದ್ಯೋಗಿಗಳು ಮಧ್ಯಾಹ್ನ 2 ರಿಂದ 2.30ರ ನಡುವೆ ನಿದ್ರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ವ್ಯವಹಾರ ಎಂಬ ನಿದ್ರೆಯಲ್ಲಿ ಮಗ್ನರಾಗಿದ್ದೇವೆ. ಆದರೆ, ವಿಶ್ರಾಂತಿಯ ನಿರ್ಣಾಯಕ ಅಂಶಕ್ಕೆ ನ್ಯಾಯ ಸಲ್ಲಿಸಲು ಈವರೆಗೂ ನಾವು ವಿಫಲರಾಗಿದ್ದೇವೆ. ನಾವು ಯಾವಾಗಲೂ ಚಿಕ್ಕ ನಿದ್ರೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ಚೈತನ್ಯ ಅವರು ಮೇಲ್ ನಲ್ಲಿ ಬರೆದಿದ್ದಾರೆ.
ಟ್ವಿಟರ್ ನ ನೋಡಿದ ಅನೇಕರು ಉತ್ತಮ ನಿರ್ಧಾರ ಎಂದು ಕಾಮೆಂಟ್ ಮಾಡಿದ್ದಾರೆ.
PublicNext
07/05/2022 07:07 pm