ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಸಹಸ್ರಾರು ನರ್ಸಿಂಗ್ ವಿದ್ಯಾರ್ಥಿಗಳನ್ನು ತಲುಪಿದ ಕನ್ನಡದ preped.in

ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಅರೆವೈದ್ಯದಕೀಯ (ಪ್ಯಾರಾ ಮೆಡಿಕಲ್ ) ವಿಷಯಗಳನ್ನು ಸುಲಿದ ಬಾಳೆಹಣ್ಣಿನಂತೆ ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಬೋಧಿಸಿ ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭಗೊಳಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ preped.in ಆ್ಯಪ್ ರಾಜ್ಯದ ವಿವಿಧ ಜಿಲ್ಲೆಗಳ ಎರಡೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿ, ಅವರ ಭವಿಷ್ಯದ ಕನಸನ್ನು ನನಸು ಮಾಡುತ್ತಿದೆ.

ಈಗಾಗಲೇ ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಹಲವು ವಿದ್ಯಾರ್ಥಿಗಳು ಉಚಿತವಾಗಿ ಲಭ್ಯವಿರುವ ಡೆಮೋ ಕ್ಲಾಸುಗಳನ್ನು ಆಲಿಸುವ ಮೂಲಕ preped.in ಆ್ಯಪ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ತಮ್ಮ ಸ್ನೇಹಿತರೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಧಾರವಾಡ ಜಿಲ್ಲೆಗಳು ಸೇರಿದಂತೆ ನಂಜನಗೂಡು, ಹಂಸಭಾವಿ, ಪುತ್ತೂರು, ಚಾಮರಾಜನಗರ ಜಿಲ್ಲೆ, ತುಮಕೂರು ಮತ್ತಿತರ ಪ್ರದೇಶಗಳ ವಿದ್ಯಾರ್ಥಿಗಳು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಇವರಲ್ಲಿ ಅನೇಕರು preped.in ಬೆಸ್ಟ್ ಆ್ಯಪ್, ಕನ್ನಡದ ಬೆಸ್ಟ್ ಪ್ಯಾರಾಮೆಡಿಕಲ್ ಆ್ಯಪ್, ಸೂಪರ್ ಲರ್ನಿಂಗ್ ಅಪ್ಲಿಕೇಷನ್ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ನೋಡಿದರೆ preped.in ನರ್ಸಿಂಗ್ ವಿದ್ಯಾರ್ಥಿಗಳಿಗೆ ಎಷ್ಟು ಮಹತ್ವದ್ದು ಎಂಬುದು ಸ್ಪಷ್ಟವಾಗುತ್ತದೆ.

ಕೆಲವು ವೈದ್ಯರು ಕೂಡ ‘ ಇದೊಂದು ಉತ್ತಮ ಪ್ರಯತ್ನ, ವಿಷಯಗಳ ಕಲಿಕೆ ಸುಲಭವಾಗಿದೆ, ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ preped.in ಗೆ 4.5 ರೇಟಿಂಗ್ ಪ್ರತಿಕ್ರಿಯೆ ದೊರಕಿರುವುದು ಗಮನಾರ್ಹ.

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬಿಟ್ಟರೆ ಪ್ರಾದೇಶಿಕ ಭಾಷೆಯಲ್ಲಿ ಬೋಧಿಸಬೇಕೆಂಬ ಪ್ರಯತ್ನ ಕನ್ನಡದಲ್ಲಿ ನಡೆದಿರುವುದು ದೇಶದಲ್ಲೇ ಎರಡನೇ ಪ್ರಯೋಗ ಎನ್ನಲಾಗಿದೆ. ಈ ಮೊದಲು ಹಿಂದಿ ಭಾಷೆಯಲ್ಲೂ ಈ ವಿಷಯಗಳನ್ನು ಕಲಿಸುವ ಪ್ರಯತ್ನ ನಡೆದಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಅದನ್ನು ಬಿಟ್ಟರೆ ಕರ್ನಾಟಕ ರಾಜ್ಯದಲ್ಲಿ ಕನ್ನಡದಲ್ಲಿ ಕಲಿಸುವ ಪ್ರಯೋಗ ಮೊದಲ ಬಾರಿಗೆ ಬಾಗಲಕೋಟೆಯ ತಜ್ಞ ವೈದ್ಯ ಡಾ.ಸಂದೀಪ ಹುಯಿಲಗೋಳ ಹಾಗೂ ತಂಡದವರಿಂದ ನಡೆದಿರುವುದು ವಿಶೇಷ ಹಾಗೂ ಉತ್ತರ ಕರ್ನಾಟಕದವರಿಗೆ ಅಭಿಮಾನದ ಸಂಗತಿಯಾಗಿದೆ.

ಕೆಲವು ದಿನಗಳ ಹಿಂದೆ ‘ರೆಸ್ಕಿಲಿಂಗ್ ಹೇಲ್ತ್ ಕೇರ್ ಫಾರ್ ನ್ಯೂ ಇಂಡಿಯಾ’ ಎಂಬ ವೆಬಿನಾರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಕೂಡ preped.in ಅಪ್ಲಿಕೇಷನ್ ಬಗ್ಗೆ ಪ್ರಸ್ತಾಪಿಸಿರುವುದು ಗಮನಾರ್ಹ.

ವಿನೂತನ ಐಡಿಯಾಗಳು ಹಾಗೂ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಕೂಡ 2021ನೇ ಸಾಲಿನಲ್ಲಿ ಈ preped.in ಅಪ್ಲಿಕೇಷನ್ ನ್ನು ಉತ್ತಮ ಪ್ರಯತ್ನ ಎಂದು ಪ್ರಶಂಸಿಸುವ ಮೂಲಕ ಆಯ್ಕೆ ಮಾಡಿ ಪ್ರೋತ್ಸಾಹ ನೀಡಿದೆ.

ವಿನೂತನ ಐಡಿಯಾಗಳಿರುವ ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ದೇಶದ ನಾನಾ ಭಾಗಗಳಿಂದ ಫೌಂಡೇಷನ್ ಗೆ 2021ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದವು. ಅವುಗಳಲ್ಲಿ ದೇಶದಲ್ಲೇ ಕೇವಲ 20 ಸ್ಟಾರ್ಟ್ ಅಪ್‍ಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ರಾಜ್ಯದಿಂದ ಆಯ್ಕೆಯಾದ ಎರಡೇ ಎರಡು ಸ್ಟಾರ್ಟ್ ಅಪ್‍ಗಳಲ್ಲಿ preped.in ಕೂಡ ಒಂದು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ಕನ್ನಡದಲ್ಲಿ ಆರಂಭವಾಗಿರುವ ಈ ಆ್ಯಪ್ ನ್ನು ಗಮನಿಸಿರುವ ತಮಿಳುನಾಡಿನ ಮೂತ್ರಪಿಂಡ ತಜ್ಞರೊಬ್ಬರು ತಮಿಳು ಭಾಷೆಯಲ್ಲೂ ಇದನ್ನು ರೂಪಿಸುವ ಯೋಜನೆ ರೂಪಿಸಿ ಡಾ.ಸಂದೀಪ ಹುಯಿಲಗೋಳ ಅವರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ. ದೇಶದ ಬೇರೆ ಬೇರೆ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ನರ್ಸಿಂಗ್ ಕೋರ್ಸ್ ಕಲಿಯಲು ಅವಕಾಶ ದೊರೆಯುವುದು ಹಾಗೂ ಇದಕ್ಕೆ ಕನ್ನಡದಲ್ಲಿ ಆರಂಭಿಸಲಾದ preped.in ಆ್ಯಪ್ ಪ್ರೇರಣೆಯಾಗುತ್ತಿದೆ ಎಂಬುದು ಕನ್ನಡಿಗರ ಪಾಲಿಗೂ ಅಭಿಮಾನದ ಸಂಗತಿಯಾಗಿದೆ.

https://play.google.com/store/apps/details?id=com.prepare_edutech.preped ಡೌನ್‍ಲೋಡ್ ಮಾಡಿಕೊಂಡು ನರ್ಸಿಂಗ್ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂಬುದು ಈ ಆ್ಯಪ್ ಅಭಿವೃದ್ಧಿಪಡಿಸಿದ ತಂಡದ ಕಳಕಳಿಯಾಗಿದೆ.

Edited By : Nagesh Gaonkar
PublicNext

PublicNext

06/02/2022 08:55 am

Cinque Terre

123.61 K

Cinque Terre

1

ಸಂಬಂಧಿತ ಸುದ್ದಿ