ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರ್ಸಿಂಗ್ ಕಲಿಕೆ ಸುಲಭಗೊಳಿಸಿದ preped app

ಆಧುನಿಕ ತಂತ್ರಜ್ಞಾನದ ಸಹಾಯದಿಂದ ರಾಜ್ಯದಲ್ಲಿ ನರ್ಸಿಂಗ್ ಹಾಗೂ ಅರೆವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಸುಲಭಗೊಳಿಸಲು ರೂಪಿಸಲಾದ preped.in ಆ್ಯಪ್ ಸರಳ ಅಧ್ಯಯನಕ್ಕೊಂದು ಹೊಸ ಆಯಾಮ ನೀಡಿದೆ. ಗುಣಮಟ್ಟದ ಸೇವೆ ಒದಗಿಸಲು ಶುಶ್ರೂಷಕರಲ್ಲಿ ಭರವಸೆಯನ್ನೂ ಮೂಡಿಸಿದೆ.

ಬಾಗಲಕೋಟೆಯ ಮೂತ್ರಪಿಂಡ ತಜ್ಞ ಡಾ.ಸಂದೀಪ ಹುಯಿಲಗೋಳ ಹಾಗೂ ತಂಡದವರು ಹೊರತಂದ ಈ preped.in ಆ್ಯಪ್ ಹಲವು ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಲು ದಾರಿದೀಪವಾಗಿದೆ.

ನಮಗೆ ತಿಳಿಯದ ಅನೇಕ ವಿಷಯಗಳನ್ನು ಪ್ರಶ್ನೆಗಳ ಮೂಲಕ ಪುನಃ ಪುನಃ ಕೇಳಿದರೂ ಈ ಆ್ಯಪ್ ನಲ್ಲಿ ಉಪನ್ಯಾಸಕರು ಮತ್ತೊಮ್ಮೆ ತಿಳಿಹೇಳುವುದರಿಂದ ವಿಷಯ ಮನದಟ್ಟಾಗುತ್ತಿದೆ ಎಂಬುದು preped.in ಡೌನ್ ಲೋಡ್ ಮಾಡಿಕೊಂಡ ವಿದ್ಯಾರ್ಥಿಗಳ ಅಭಿಪ್ರಾಯವೂ ಆಗಿದೆ.

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಶುಶ್ರೂಷಕರಿಗೆ ದೊರೆಯುತ್ತಿರುವ ತರಬೇತಿ ಸಾಕಷ್ಟು ಕಡಿಮೆ ಇದೆ. ಶುಶ್ರೂಷಕರ ಸೇವೆಯ ಗುಣಮಟ್ಟವೂ ಕಡಿಮೆ ಇದೆ ಎನ್ನಲಾಗುತ್ತಿದ್ದು, ಇದರಿಂದ ವೈದ್ಯರು ಹಾಗೂ ಅರೆವೈದ್ಯರ ನಡುವಿನ ಅಂತರವೂ ಹೆಚ್ಚುತ್ತಿದೆ.

ಇದನ್ನು ಗಮನಿಸಿಯೇ ಡಾ.ಸಂದೀಪ ಹುಯಿಲಗೋಳ ಹಾಗೂ ತಂಡದವರು preped.in ಆ್ಯಪ್ ಆರಂಭಿಸಿದ್ದು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ನರ್ಸ್ಗಳಿಂದಲೂ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದಲ್ಲೇ ಮೊದಲ ಹಾಗೂ ವಿನೂತನ ಪ್ರಯೋಗ ಎನಿಸಿದ ಈ preped.in ಆ್ಯಪ್ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಲಭಿಸಿದ್ದು ಕಳೆದ ವರ್ಷ ಅಂದರೆ 2021 ಜೂನ್ ತಿಂಗಳಲ್ಲಿ. ಮೂರು ತಿಂಗಳ ನಂತರ ಅಂದರೆ ಸೆಪ್ಟೆಂಬರ್ 2021 ರಿಂದ ಗೂಗಲ್ ಪ್ಲೇಸ್ಟೋರ್ ಮೂಲಕವೂ preped ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು preped ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ.

ನರ್ಸಿಂಗ್ ಅಥವಾ ಅರೆವೈದ್ಯಕೀಯ ಕೋರ್ಸ್ ಕಲಿಯಲು ಗ್ರಾಮೀಣ ಭಾಗದಿಂದಲೇ ಬರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ವಿಷಯಗಳನ್ನು ತಿಳಿಸಿ ಅನುಕೂಲ ಕಲ್ಪಿಸಬೇಕು ಎಂದು ಆರಂಭವಾದ ಈ preped.in ಆ್ಯಪ್ ದಲ್ಲಿ ಅರೆವೈದ್ಯಕೀಯ ಕೋರ್ಸ್ ಗೆ ಸಂಬಂಧಿಸಿದ ಮೊದಲ ವರ್ಷದ ಸಂಪೂರ್ಣ ವಿಷಯಗಳನ್ನೂ ಅಳವಡಿಸಲಾಗಿದೆ. ಇನ್ನು ಎರಡನೇ ವರ್ಷದ ನಾಲ್ಕು ವಿಭಾಗಗಳ ಎಲ್ಲ ವಿಷಯಗಳು ಕೂಡ ಲಭ್ಯ ಇವೆ.

ಮೊದಲ ಎರಡು ವರ್ಷಗಳ ವಿದ್ಯಾರ್ಥಿಗಳ ಪ್ರತಿಕ್ರಿಯೆ ಗಮನಿಸಿ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ತಿಳಿದು ಮೂರನೇ ವರ್ಷದ ವಿಷಯಗಳನ್ನು ಅಳವಡಿಸುವ ಚಿಂತನೆಯೂ ನಡೆಯುತ್ತಿದೆ. ಈ ವಿಷಯಗಳ ರೆಕಾರ್ಡಿಂಗ್ ಕೂಡ ನಡೆಯುತ್ತಿದೆ.

ಇನ್ನು ಜನರಲ್ ನರ್ಸಿಂಗ್ ಮಿಡ್ವೈಫರಿ (ಜಿಎನ್ಎಂ) ಅಂದರೆ ನರ್ಸಿಂಗ್ ಕೋರ್ಸ್ ಗೆ ಸಂಬಂಧಿಸಿದಂತೆ ಮೊದಲ ವರ್ಷದ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಷಯವನ್ನು ಅಳವಡಿಸಲಾಗಿದೆ. ಈ ವಿಷಯ ನರ್ಸಿಂಗ್ ಕೋರ್ಸ್ ನ ಭದ್ರ ಬುನಾದಿ ಎನ್ನಲಾಗಿದ್ದು, ಈ ವಿಷಯವನ್ನು ಸಂಪೂರ್ಣ ಕಲಿತವರು ಯಶಸ್ವಿ ಶುಶ್ರೂಷಕರಾಗಿ ಸೇವೆ ಸಲ್ಲಿಸಬಹುದಾಗಿದೆ. ನರ್ಸಿಂಗ್ ಉದ್ಯೋಗ ಸಂದರ್ಶನಕ್ಕೆ ಹಾಜರಾಗುವವರಿಗೂ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಪ್ರಧಾನವಾಗಿ ಕೇಳುವುದರಿಂದ ಕೋರ್ಸ್ ಪೂರ್ಣಗೊಳಿಸಿದವರೂ ಸಬ್ಸ್ಕ್ರೈಬ್ ಆಗುವ ಮೂಲಕ ಸಂದರ್ಶನಕ್ಕೂ ಸಿದ್ಧತೆ ನಡೆಸಿಕೊಳ್ಳಬಹುದಾಗಿದೆ.

ಇನ್ನು ಎರಡು ಹಾಗೂ ಮೂರನೇ ವರ್ಷದ ವಿಷಯಗಳನ್ನು preped.in ಆ್ಯಪ್ ದಲ್ಲಿ ಅಳವಡಿಸುವ ಕಾರ್ಯವೂ ಭರದಿಂದ ಸಾಗಿದ್ದು, ತರಗತಿಗಳ ರೆಕಾರ್ಡಿಂಗ್ ಕೂಡ ಪ್ರಗತಿಯಲ್ಲಿದೆ.

ನರ್ಸಿಂಗ್ ಹಾಗೂ ಅರೆವೈದ್ಯಕೀಯ ಕೋರ್ಸ್ ಗಳ ಎಲ್ಲ ವಿಭಾಗಗಳ ಎಲ್ಲ ವಿಷಯಗಳನ್ನು ಹಾಗೂ ಅಪರೂಪ ಎನಿಸಿದ ವಿಷಯಗಳನ್ನು ಬೋಧಿಸುವ, ಕಳೆದ 13 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಹಾಗೂ app ಇನ್ನಷ್ಟು ಅಭಿವೃದ್ಧಿಪಡಿಸುವ ಚಿಂತನೆ ಕೂಡ ನಡೆಯುತ್ತಿದೆ.

ಪ್ರತಿ ತರಗತಿಯಲ್ಲೂ ವೈದ್ಯರು ಹಾಗೂ ನರ್ಸಿಂಗ್ ವಿಷಯ ಪರಿಣತರು ಕನ್ನಡದಲ್ಲೇ ಬೋಧಿಸುವುದರಿಂದ ಕ್ಲಿಷ್ಟಕರ ವಿಷಯಗಳನ್ನೂ ಅತ್ಯಂತ ಸರಳವಾಗಿ ಅರ್ಥಮಾಡಿಕೊಂಡು ಕಲಿಯುವ ಅವಕಾಶವನ್ನು https://play.google.com/store/apps/details?id=com.prepare_edutech.preped ಡೌನ್ಲೋಡ್ ಮಾಡಿಕೊಂಡರೆ ಅಥವಾ preped.in ಲಿಂಕ್ ಸಂಪರ್ಕಿಸಿದರೆ ಲಭ್ಯವಿರುವ ಎಲ್ಲ ವಿಷಯಗಳ ತರಗತಿಗಳನ್ನೂ ಆಲಿಸಬಹುದಾಗಿದೆ.

Edited By : Manjunath H D
PublicNext

PublicNext

01/02/2022 09:51 am

Cinque Terre

127.32 K

Cinque Terre

2

ಸಂಬಂಧಿತ ಸುದ್ದಿ