ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾದಿಂದ ಕಾಪಾಡಿದ ತಿಮ್ಮಪ್ಪನಿಗೆ 3.5 ಕೆ.ಜಿ ಚಿನ್ನ ಕೊಟ್ಟ ಭಕ್ತ..

ತಿರುಪತಿ (ಆಂಧ್ರ ಪ್ರದೇಶ) : ದೇಶದ ಜನರಿಗೆ ದೇವರಲ್ಲಿ ಅಪಾರವಾದ ನಂಬಿಕೆ ಇದೆ. ಇದರಿಂದಾಗಿ ಅನೇಕರು ಸಾವನ್ನು ಗೆದ್ದು ಬಂದ ಉದಾಹರಣೆಗಳು ಇವೆ. ಅದೆಷ್ಟೋ, ಬಾರಿ ವೈದ್ಯರಿಂದ ಗುಣಪಡಿಸಲಾಗದ ಕಾಯಿಲೆಗಳನ್ನು ದೇವರಲ್ಲಿ ನಂಬಿಕೆ ಇಟ್ಟು ಆತ್ಮಸ್ಥೈರ್ಯದಿಂದ ಗುಣಮುಖರಾದ ಬಗ್ಗೆ ಕೇಳಿದ್ದೇವೆ.

ಸದ್ಯ ಇಲ್ಲೊಂದು ಘಟನೆಯಲ್ಲಿ ಭಕ್ತನೊಬ್ಬ ತಾನು ಕೊರೊನಾದಿಂದ ಸುಧಾರಿಸಿಕೊಂಡರೆ ತಿರುಮಲ ವೆಂಕಟೇಶನಿಗೆ ಬಂಗಾರದ ಶಂಖ-ಚಕ್ರ ಕಾಣಿಕೆ ನೀಡುವುದಾಗಿ ಹರಕೆ ಹೇಳಿಕೊಂಡಿದ್ದು ಅದೇ ರೀತಿ ಕಾಣಿಕೆ ಅರ್ಪಿಸಿದ್ದಾರೆ. ಈ ಭಕ್ತ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಇಂಥದ್ದೊಂದು ಬಹು ಬೆಲೆ ಬಾಳುವ ಕಾಣಿಕೆ ನೀಡಿರುವವರು ತಂಗದೊರೈ. ಇವರು ತಮಿಳುನಾಡಿನ ಥೇನಿಯನವರು. ತಿರುಪತಿಯಲ್ಲಿ ನಡೆದ ಮಹಾ ಪೂಜೆಯ ಬಳಿಕ ಚಿನ್ನದ ಶಂಖ ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ.

ಇದರ ಬೆಲೆ ಎರಡು ಕೋಟಿ ರೂಪಾಯಿಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇಂಥದ್ದೊಂದು ಬಹುಬೆಲೆಬಾಳುವ ಕಾಣಿಕೆ ನೀಡಲು ಕಾರಣ ಕೋವಿಡ್ ಹೌದು. ಬಿಜಿನೆಸ್ ಮನ್ ಆಗಿರುವ ತಂಗದೊರೈ, ಲಾಕ್ ಡೌನ್ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೋಂಕಿನಿಂದ ಬಳಲುತ್ತಿದ್ದರು. ಮಾತ್ರವಲ್ಲದೇ ನಷ್ಟವನ್ನೂ ಅನುಭವಿಸಿದ್ದರು. ತಾವು ಬೇಗ ಗುಣಮುಖರಾಗಿ ಸಂಕಷ್ಟದಿಂದ ಪಾರಾಗಲು ತಿರುಮಲನಿಗೆ ಇವರು ಪ್ರಾರ್ಥನೆ ಸಲ್ಲಿಸಿದ್ದರು. ಹೀಗಾದರೆ ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಚಿನ್ನದ ಆಭರಣ ಅರ್ಪಿಸಿರುವುದಾಗಿ ತಂಗದೊರೈ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

25/02/2021 10:58 am

Cinque Terre

65.3 K

Cinque Terre

1