ಮಂಡ್ಯ : ಕಣ್ಣಿಗೆ ಕಾಣಿಸದಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ಸಂಕಟದ ಕೂಪಕ್ಕೆ ತಳ್ಳಿದೆ. ಈ ಮಾರಕ ವೈರಸ್ ಅದ್ಯಾವಾಗ ಈ ಜಗತ್ತನ್ನು ಬಿಟ್ಟು ಹೋಗುತ್ತಪ್ಪ ಎಂಬ ನಿರೀಕ್ಷೆಯಲ್ಲಿ ಜನ ಇರುವಾಗ ಈ ವೈರಸ್ ಇನ್ನೂ 30 ವರ್ಷ ಭೂಮಂಡಲ ಬಿಟ್ಟು ಹೋಗೋದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಲಾಜಿ ಶರ್ಮ, ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ 30 ವರ್ಷ ಭೂ ಮಂಡಲದಲ್ಲಿ ಇರುತ್ತದೆ. ಎರಡು ವರ್ಷ ಕೊರೊನಾ ಜಾಗೃತಿಯನ್ನು ಪ್ರತಿಯೊಬ್ಬರೂ ವಹಿಸಬೇಕು. ನಂತರದ ದಿನಗಳಲ್ಲಿ ಕೊರೊನಾ ಸಾಮಾನ್ಯ ಜ್ವರದಂತೆ 30 ವರ್ಷ ನಮ್ಮೊಂದಿಗೆ ಉಳಿದುಕೊಳ್ಳಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದಾಗ ಮಾತ್ರ ಎಲ್ಲರಿಗೂ ಒಳಿತಾಲಿದೆ. ಮನುಷ್ಯ ದುರಹಂಕಾರ, ದುರಾಸೆ, ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿದ್ರೆ ಮಹಾಮಾರಿ ನಿರ್ನಾಮಾವಾಗಲಿದೆ ಎಂದು ಹೇಳಿದ್ದಾರೆ.
PublicNext
23/08/2021 03:47 pm