ವಾಷಿಂಗ್ಟನ್: ಮಾರಕ ಕೊರೊನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಇಂದು ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಲಸಿಕೆ ಸುರಕ್ಷತೆಯನ್ನು ಅಮೆರಿಕದ ನಾಗರಿಕರಿಗೆ ಸಾರುವ ನಿಟ್ಟಿನಲ್ಲಿ ಟಿವಿ ನೇರ ಪ್ರಸಾರದಲ್ಲಿ ಬೈಡನ್ ಲಸಿಕೆ ಹಾಕಿಸಿಕೊಂಡರು. ಫೈಜರ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿರುವ ಬೈಡನ್, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಬೈಡನ್ ಅವರಗಿಂತ ಕೆಲ ಗಂಟೆಗಳ ಮೊದಲು ಅವರ ಪತ್ನಿ ಜಿಲ್ ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಬ್ಬರಿಗೂ ನೇವಾರ್ಕ್ ಡೆಲವೇರ್ನ್ ಕ್ರಿಸ್ಟಿನಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವ್ಯಾಕ್ಸಿನೇಷನ್ ನೀಡಲಾಗಿದ್ದು, ಎಲ್ಲ ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ.
ಡೆಮೊಕ್ರೆಟಿಕ್ ಪಕ್ಷದ ಅತಿದೊಡ್ಡ ನಾಯಕ ಫೈಜರ್ ಲಸಿಕೆ ಹಾಕಿಸಿಕೊಂಡಂತಾಗಿದೆ. ಸದ್ಯ ಮೊದಲ ಡೋಸ್ ನೀಡಲಾಗಿದ್ದು, ತದನಂತರ ಎರಡನೇ ಡೋಸ್ ನೀಡಲಾಗುವುದು. ಎರಡನೇ ಡೋಸ್ ನೀಡುವ ದಿನಾಂಕವನ್ನ ಅಧ್ಯಕ್ಷರ ವೈದ್ಯಕೀಯ ತಂಡ ನಿಗದಿ ಮಾಡಲಿದೆ.
PublicNext
22/12/2020 12:23 pm