ಚೆನ್ನೈ: ಬ್ರಿಟನ್ ಜನರಲ್ಲಿ ಆತಂಕವನ್ನು ಹೆಚ್ಚಿಸಿರುವ ಹೊಸ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ.
ಹೌದು. ಬ್ರಿಟನ್ ಪ್ರವಾಸದ ಬಳಿಕ ಚೆನ್ನೈಗೆ ಬಂದಿರುವ ವ್ಯಕ್ತಿಗೆ ಕೊರೊನಾ ರೂಪಾಂತರ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಬ್ರಿಟನ್‌ನಲ್ಲಿ ಈ ಹೊಸ ಕೋವಿಡ್ ಸೋಂಕು ಮಿತಿಮೀರಿರುವ ಹಿನ್ನೆಲೆಯಲ್ಲಿ ದೇಶದ ವಿಮಾನಯಾನ ಸಚಿವಾಲಯವು ಬ್ರಿಟನ್-ಭಾರತ ನಡುವಿನ ವಿಮಾನ ಹಾರಾಟವನ್ನು ಡಿಸೆಂಬರ್ 31ರವರೆಗೆ ರದ್ದುಗೊಳಿಸಿದೆ.
ಸದ್ಯ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿರುವ ವ್ಯಕ್ತಿ ಚೆನ್ನೈ ಮೂಲದವರಾಗಿದ್ದು, ಬ್ರಿಟನ್ ಪ್ರವಾಸದಲ್ಲಿದ್ದರು. ಇದೇ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಈ ಹೊಸ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚೆನ್ನೈಗೆ ಬಂದ ಅವರನ್ನು ಆರ್ಟಿ, ಪಿಸಿಆರ್ ಟೆಸ್ಟ್‌ಗೆ ಒಳಪಡಿಸಿದಾಗ ಹಳೆಯ ಕೊರೊನಾ ಸೋಂಕಿನೊಟ್ಟಿಗೆ ಹೊಸ ಸೋಂಕಿನ ಪತ್ತೆಯೂ ಆಗಿದೆ. ಹೀಗಾಗಿ ಈ ವ್ಯಕ್ತಿಯ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ವರದಿಯಾಗಿದೆ.
PublicNext
22/12/2020 11:11 am