ಜೈಪುರ(ರಾಜಸ್ಥಾನ): 2019ರ ಡಿಸೆಂಬರ್‌ನಲ್ಲಿ ಕೋಟಾ ಮೂಲದ ಒಂದೇ ಸರ್ಕಾರಿ ಆಸ್ಪತ್ರೆಯಲ್ಲಿ 100 ಶಿಶುಗಳು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಈಗ ಮತ್ತೊಂದು ಆತಂಕಕಾರಿ ಘಟನೆ ಅದೇ ಆಸ್ಪತ್ರೆಯಲ್ಲಿ ನಡೆದಿದೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ 9 ಶಿಶುಗಳು ಮರಣ ಹೊಂದಿವೆ. ಜತೆಗೆ ಇನ್ನೂ ಹಲವು ಶಿಶುಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಆಸ್ಪತ್ರೆಯ ಮೇಲಾಧಿಕಾರಿಗಳನ್ನು ಪ್ರಶ್ನಿಸಿದಾಗ ಇದು ಸಹಜ ಸಾವು. ಯಾವುದೇ ಗಂಭೀರ ಕಾಯಿಲೆ ಅಥವಾ ಸೋಂಕಿನಿಂದ ಆಗಿಲ್ಲ ಎಂದಿದ್ದಾರೆ.
ಆದರೆ ಈ ಉತ್ತರವನ್ನ ಪೋಷಕರು ನಂಬುವ ಸ್ಥಿತಿಯಲ್ಲಿ ಇಲ್ಲ. ಕೇವಲ ಒಂದೇ ತಿಂಗಳಿನಲ್ಲಿ 100 ಶಿಶುಗಳ ಸಾವು ಸಂಭವಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಗ್ಗೆ ತಿಳಿದ ಆರೋಗ್ಯ ಇಲಾಖೆ ಮೇಲಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೆಚ್ಚುವರಿ ವೈದ್ಯರು ಹಾಗೂ ಶುಶ್ರೂಷಕಿಯರನ್ನು ನೇಮಿಸಲು ಸೂಚಿಸಿದ್ದಾರೆ.
PublicNext
11/12/2020 04:49 pm