ಬೆಂಗಳೂರು:ಶುಕ್ರವಾರ ಖಾಸಗಿ ಆಸ್ಪತ್ರೆಗಳ ಎಲ್ಲಾ ಓಪಿಡಿ (ಹೊರ ರೋಗಿಗಳ ವಿಭಾಗ)ಗಳು ಬಂದ್ ಆಗಲಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ವೈದ್ಯರು ನಾಳೆ ಬಂದ್ ಮಾಡ್ತಿದ್ದಾರೆ.
ಬೆಂಗಳೂರು: ಕಳೆದ ಶನಿವಾರವಷ್ಟೇ ಕನ್ನಡ ಸಂಘಟನೆಗಳ ಬಂದ್ ಮಾಡಿದ್ದರು. ರೈತ ಸಂಘಟನೆಗಳಂತೂ 4 ದಿನಗಳಿಂದ ಬಂದ್, ಪ್ರತಿಭಟನೆ ನಡೆಸುತ್ತಿದ್ದಾರೆ ಇದೇ ಸಮಯ ಅಂತ ಇವತ್ತು ಸಾರಿಗೆ ನೌಕರರು ಕೂಡ ರೈತರ ಜೊತೆ ಸೇರ್ಕೊಂಡು ಬೀದಿಗಿಳಿದಿದ್ದರು. ಈ ಬೆನ್ನಿಗೆ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ಮತ್ತೊಂದು ಗೆಜೆಟ್ ನೋಟಿಫಿಕೇಶನ್ ವಿರುದ್ಧ ವೈದ್ಯರು ಸಿಡಿದೆದ್ದಿದ್ದಾರೆ. ನಾಳೆ ದೇಶವ್ಯಾಪಿ ಓಪಿಡಿ ಬಂದ್ ಮಾಡೋ ಮೂಲಕ ಪ್ರತಿಭಟನೆ ಮಾಡಲು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರೆ ನೀಡಿದೆ.
ಒಪಿಡಿ ಬಂದ್ ಮಾಡಲು ಕಾರಣವೇನು?: ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮೂಲಕ ಆಯುರ್ವೇದಿಕ್ ವ್ಯಾಸಂಗ ಮಾಡಿದ ವೈದ್ಯರು, ಅಲೋಪತಿ ವೈದ್ಯರು ಮಾಡುವ ಅನೇಕ ಶಸ್ತ್ರಚಿಕಿತ್ಸೆಯನ್ನು ಮಾಡಬಹುದೆಂದು ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಮಾಡಲು ಮುಂದಾಗಿದ್ದಾರೆ. ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ ಕೊಡಬಾರದು. ಆ ಅಧಿಸೂಚನೆಯನ್ನ ತಿದ್ದುಪಡಿ ಮಾಡಬೇಕು ಎಂದು ಒತ್ತಡ ಹಾಕಲು ನಾಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಓಪಿಡಿ ಬಂದ್ ಮಾಡುತ್ತಿದ್ದಾರೆ.
PublicNext
10/12/2020 09:22 pm