ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಚ್ಚರಿಕೆ: ಮಾಸ್ಕ್ ಧರಿಸದಿದ್ದರೆ 1 ಲಕ್ಷ ರೂ.ವರೆಗೆ ದಂಡ!

ಬೆಂಗಳೂರು: ಹಲವೆಡೆ ಜನರು ಕೊರೊನಾ ನಿಮಯವನ್ನು ಗಾಳಿಗೆ ತೂರಿದ್ದರಿಂದ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ದಂಡದ ಪ್ರಮಾಣವನ್ನು ಇಳಿಸಲಾಗಿತ್ತು. ಆದರೆ ಇದರಿಂದ ಮತ್ತೆ ಜನರು ನಿರ್ಲಕ್ಷ್ಯದಿಂದ ಓಡಾಡತೊಡಗಿದ ಜನರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ.

ಹೌದು. ಬೆಂಗಳೂರಿನ ಹೋಟೆಲ್, ಕಲ್ಯಾಣ ಮಂಟಪ, ಚಿತ್ರಮಂದಿರ, ಮಾಲ್, ಸಮಾರಂಭ, ಅಂಗಡಿ ಮುಂಗಟ್ಟುಗಳಲ್ಲಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇಂತಹ ಪ್ರದೇಶದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾದರೆ ಸಂಬಂಧಪಟ್ಟ ಮಾಲೀಕರೇ ದುಬಾರಿ ದಂಡ ಪಾವತಿಸಬೇಕಾಗುತ್ತದೆ.

ಈ ಸಂಬಂಧ ಆದೇಶ ಹೊರಡಿಸಿರುವ ಬಿಬಿಎಂಪಿ ಕಮಿಷನರ್ ಮಂಜುನಾಥ್‌ ಪ್ರಸಾದ್ ಅವರು, 'ಸಾಂಕ್ರಮಿಕ ರೋಗಗಳ ಸುಗ್ರೀವಾಜ್ಞೆ ನಿಯಮದನ್ವಯ ನಿಯಮ ಉಲ್ಲಂಘನೆ ಮಾಡಿದರೆ ಈ ದಂಡ ವಿಧಿಸಲಾಗುವುದು. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್‌ ಮಾರ್ಷಲ್ ದಂಡ ವಿಧಿಸಿಬಹುದು. 10 ಸಾವಿರ ರೂ.ನಿಂದ 1 ಲಕ್ಷದವರೆಗೆ ದಂಡ ವಿಧಿಸಬಹುದು' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

06/12/2020 12:27 pm

Cinque Terre

47.5 K

Cinque Terre

5