ಮೈಸೂರು : ಆಧುನಿಕ ಜಗತ್ತಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಬಹುತೇಕರು ಡ್ರೈ ಫ್ರೂಟ್ಸ್ ಮೊರೆ ಹೋಗುವುದು ಸಾಮಾನ್ಯ.
ಆದ್ರೆ ಇದೇ ಡ್ರೈ ಫ್ರೂಟ್ಸ್ ನಿಂದ ಮತ್ತೊಂದು ರೋಗಕ್ಕೆ ಆಹ್ವಾನ ನೀಡದಿರದಂತೆ ಎಚ್ಚರ ವಹಿಸಿ.
ಇನ್ಮುಂದೆ ಇದೇ ಡ್ರೈ ಫ್ರೂಟ್ಸ್ ಖರೀದಿಯ ಮುನ್ನ ಒಮ್ಮೆ ಯೋಚಿಸಬೇಕಿದೆ.
ಹೌದು, ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಹುಳು ಮಿಶ್ರಿತ ಖರ್ಜೂರ ಕಂಡುಬಂದಿದ್ದು, ಗ್ರಾಹಕರು ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ವಿಚಾರವನ್ನು ಮುಟ್ಟಸಿದ್ದಾರೆ.
ಶ್ರೀಕಾಂತ್ ಎಂಬುವವರು ಈ ಮಳಿಗೆಯಲ್ಲಿ ಹಸಿ ಖರ್ಜೂರ ಖರೀದಿ ಮಾಡಿದ್ದರು.
ಬಳಿಕ ಮನೆಗೆ ಬಂದು ತಮ್ಮ ಮಕ್ಕಳಿಗೆ ನೀಡುವ ವೇಳೆ ಖರ್ಜೂರದಲ್ಲಿ ಬಿಳಿ ಹುಳ ಹಾಗೂ ಬೂಸ್ಟ್ ಇದ್ದದ್ದು ಪತ್ತೆಯಾಗಿದೆ.
ಕೂಡಲೇ ಅವರು ಪಾಲಿಕೆ ಆರೋಗ್ಯ ನಿರೀಕ್ಷಕರಾದ ರಾಜೇಶ್ವರಿರವರ ಗಮನಕ್ಕೆ ತಂದಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಮಳಿಗೆಯಲ್ಲಿದ್ದ ಖರ್ಜೂರದ ಬಾಕ್ಸ್ಗಳನ್ನು ಪರಿಶೀಲಿಸಿದ ವೇಳೆ ಹುಳುಗಳು ಕಂಡುಬಂದಿವೆ.
ಕೂಡಲೇ ಅವರು ಮಳಿಗೆ ಮಾಲೀಕರಿಗೆ ವಿವರಣೆ ಕೇಳಿ ಅಲ್ಲಿದ್ದ ಖರ್ಜೂರದ ಬಾಕ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಆರೋಗ್ಯಾಧಿಕಾರಿಗಳು ಸಹ ಮಿಕ್ಕೆಲ್ಲಾ ಪದಾರ್ಥಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಹಾಗಾಗಿ ಗ್ರಾಹಕರು ಇನ್ನು ಮುಂದಾದರೂ ಖರೀದಿಸುವ ಮುನ್ನ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ.
PublicNext
05/12/2020 12:04 pm