ಬರ್ಲಿನ್: ಹೆಮ್ಮಾರಿ ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವಲ್ಲಿ ಬಯೋಎನ್‌ಟೆಕ್ ಸಂಸ್ಥೆ ಯಶಸ್ವಿಯಾಗಿದೆ. ಅಮೆರಿಕ ಪಾಲುದಾರ ಫಿಜರ್ ಜೊತೆಗೆ ಬಯೋಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ಲಸಿಕೆಗೆ ಬಳಕೆಗೆ ಬ್ರಿಟನ್ ಬುಧವಾರ ಅನುಮೋದನೆ ನೀಡಿದ್ದು, ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ.
2008ರಂದು ಟರ್ಕಿಯ ಮೂಲದ ಉಗುರ್ ಸಾಹಿನ್ ಮತ್ತು ಅವರ ಪತ್ನಿ ಓಜ್ಲೆಮ್ ತುರೆಸಿ ದಂಪತಿ ಜರ್ಮನ್‌ನಲ್ಲಿ ಸಣ್ಣ ಸಂಸ್ಥೆಯನ್ನು ಪ್ರಾರಂಭಿಸಿದರು. ನಂತರ ಆಸ್ಟ್ರಿಯಾದ ಕ್ಯಾನ್ಸರ್ ತಜ್ಞ ಕ್ರಿಸ್ಟೋಫ್ ಹ್ಯೂಬರ್ ಜೊತೆ ಸೇರಿ ಬಯೋಎನ್‌ಟೆಕ್ ಅನ್ನು ಸ್ಥಾಪಿಸಿದ್ದರು. ಈ ಮೂಲಕ ತಂಡವೊಂದನ್ನು ಕಟ್ಟಿಕೊಂಡು ವಿವಿಧ ಸಂಶೋಧನೆಯಲ್ಲಿ ತೊಡಗಿದರೂ ಯಾವುದೇ ಲಸಿಕೆಯನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಆದರೆ ಕೊರೊನಾದಂತಹ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.
2018ರಲ್ಲಿ ಎಂಆರ್ಎನ್ಎ ಆಧಾರಿತ ಫ್ಲೂ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲು ಅಮೆರಿಕದ ಫಾರ್ಮಾ ದೈತ್ಯ ಫಿಜರ್ ಜೊತೆ ಒಪ್ಪಂದ ಮಾಡಿಕೊಂಡ ನಂತರ, ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ಸಕ್ರೀಯವಾಗಿತ್ತು. ಕೋವಿಡ್-19 ಮಹಾಮಾರಿಗೆ ಲಸಿಕೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಉಭಯ ಕಂಪನಿಗಳು ಮಾರ್ಚ್‌ನಲ್ಲಿ ಘೋಷಿಸಿದ್ದವು. ಫಿಜರ್ ಲಸಿಕೆ ಪ್ರಯೋಗದಲ್ಲಿ ಸಕರಾತ್ಮಕ ಫಲಿತಾಂಶ ದೊರಕಿದೆ. ಇದು ಕೊರೋನಾ ಸೋಂಕಿನ ಮೇಲೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ.
PublicNext
02/12/2020 08:20 pm