ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತವೇ ಕೊರೊನಾದ ಮೂಲ ಎಂದ ಚೀನಾದ ವಿಜ್ಞಾನಿಗಳು

ಬೀಜಿಂಗ್: ಹೆಮ್ಮಾರಿ ಕೊರೊನಾ ವೈರಸ್‌ ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಮಧ್ಯೆ ಚೀನಾದ ವಿಜ್ಞಾನಿಗಳು ಭಾರತವೇ ಕೊರೊನಾದ ಮೂಲ ಎಂದು ಹೇಳುತ್ತಿದ್ದಾರೆ.

2019ರ ಡಿಸೆಂಬರ್​ನಲ್ಲಿ ಕೊರೊನಾ ಮೊದಲು ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಮೂಲದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. ಈ ಬಗ್ಗೆ ಸಂಶೋಧನೆ ನಡೆಸಿರುವ ಚೀನಾ ವಿಜ್ಞಾನಿಗಳು, '2019ರ ಬಿರು ಬೇಸಿಗೆಯಲ್ಲಿ ಮನುಷ್ಯರು ಮತ್ತು ಪ್ರಾಣಿಗಳು ಒಂದೇ ನೀರನ್ನು ಉಪಯೋಗಿಸಿದ್ದರಿಂದ ಈ ವೈರಸ್‌ ಹರಡಿದೆ. ಭಾರತದಲ್ಲಿ ಹುಟ್ಟಿದ ಕೋವಿಡ್-19 ಮೊದಲು ಪ್ರಾಣಿಗಳಲ್ಲಿ ಕಾಣಿಸಿಕೊಂಡು ಮನುಷ್ಯರಿಗೆ ಹರಡಿ, ಬಳಿಕ ವುಹಾನ್ ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ' ಎಂದು ದೂರಿದೆ.

ಈ ಸಂಶೋಧನೆಗೆ ಚೀನಾದ ವಿಜ್ಞಾನಿಗಳ ತಂಡವು ಫೈಲೊಜೆನೆಟಿಕ್ ವಿಶ್ಲೇಷಣಾ ವಿಧಾನವನ್ನು (phylogenetic analysis) ಬಳಸಿದ್ದು, ವೈರಸ್ ಹೇಗೆ ರೂಪಾಂತರ ಹೊಂದುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಮೂಲಕ ವೈರಸ್​ನ ಮೂಲ ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.

ಕೊರೊನಾ ವಿಚಾರದಲ್ಲಿ ಚೀನಾ ಕೇವಲ ಭಾರತವನ್ನು ಅಷ್ಟೇ ದೂಷಿಸದೆ ಬಾಂಗ್ಲಾದೇಶ, ಅಮೆರಿಕ, ಗ್ರೀಸ್, ಆಸ್ಟ್ರೇಲಿಯಾ, ಇಟಲಿ, ಸೆಜ್ ರಿಪಬ್ಲಿಕ್, ರಷ್ಯಾ ಮತ್ತು ಸರ್ಬಿಯಾ ದೇಶದ ಮೇಲೆ ಆಪಾದನೆ ಹೊರಿಸಿದೆ.

Edited By : Vijay Kumar
PublicNext

PublicNext

28/11/2020 10:20 pm

Cinque Terre

64.66 K

Cinque Terre

3