ಇದೀಗ ಸರಿಯಾಗಿ ಚಳಿಗಾಲದ ಆರಂಭವಾಗಿದೆ. ಇಂತಹ ಸಮಯದಲ್ಲಿ ಕೆಲವು ತರಕಾರಿ ಮತ್ತು ಹಣ್ಣುಗಳನ್ನು ಅವಶ್ಯವಾಗಿ ಸವಿಯಬೇಕು.
ಮಧುಮೇಹದ ಅಪಾಯ ಕಡಿಮೆ ಮಾಡುವುದು
ಮೂಲಂಗಿಯಲ್ಲಿ ರಾಸಾಯನಿಕ ಸಂಯುಕ್ತಗಳಿವೆ. ಅವು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು.
ಗಣನೀಯವಾಗಿ ಮೂಲಂಗಿಯನ್ನು ಸೇವಿಸುವುದರಿಂದ ನೈಸರ್ಗಿಕ ಅಡಿಪೋನೆಕ್ಟಿನ್ ಅನ್ನು ಉತ್ಪಾದಿಸುವುದು. ಇದು ಇನ್ಸುಲಿನ್ಅನ್ನು ಪ್ರಚೋದಿಸುವುದರ ಮೂಲಕ ಮಧುಮೇಹದ ರಚನೆಯನ್ನು ನಿಯಂತ್ರಿಸುವುದು.
ಪಿತ್ತಜನಕಾಂಗದ ಕಾರ್ಯವನ್ನು ಹೆಚ್ಚಿಸುತ್ತದೆ
ಮೂಲಂಗಿಯಲ್ಲಿರುವ ಕೆಲವು ಸಂಯುಕ್ತಗಳು ಯಕೃತ್ ಮತ್ತು ಮೂತ್ರಪಿಂಡದಲ್ಲಿ ಇರುವ ವಿಷಕಾರಿ ಅಂಶವನ್ನು ಸುಲಭವಾಗಿ ನಿವಾರಿಸುವುದು.
ಹೃದಯದ ಆರೋಗ್ಯವನ್ನು ಸುಧಾರಿಸುವುದು
ಮೂಲಂಗಿಯಲ್ಲಿ ಆಂಟಿಆಕ್ಸಿಡೆಂಟ್ ಗಳು, ಕ್ಯಾಲ್ಸಿಯಮ್, ಪೊಟ್ಯಾಸಿಯಮ್ ಸೇರಿದಂತೆ ಇನ್ನಿತರ ಖನಿಜಾಂಶಗಳು ಸಮೃದ್ಧವಾಗಿರುತ್ತವೆ.
ಈ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ
ಗ್ಲುಕೋಸಿನೊಲೇಟ್ ಗಳು ಮತ್ತು ಸಲ್ಫರ್ ಸಂಯುಕ್ತಗಳಿವೆ. ಇದು ಕ್ಯಾನ್ಸರ್ ಉಂಟುಮಾಡುವ ಆನುವಂಶಿಕ ರೂಪಾಂತರಗಳಿಂದ ಕೋಶಗಳನ್ನು ರಕ್ಷಿಸುವ ಸಾಮಥ್ರ್ಯವನ್ನು ಪಡೆದಿದೆ.
ಇದು ಕ್ಯಾನ್ಸರ್ ಗಡ್ಡೆ ಬೆಳೆಯಲು ಪ್ರಚೋದಿಸುವ ಕೋಶಗಳ ಬೆಳವಣಿಗೆಯನ್ನು ತಡೆಯುವುದು.
ಜೀರ್ಣಕ್ರಿಯೆಗೆ ಸಹಾಯ ಮಾಡುವುದು
ಮೂಲಂಗಿಯಲ್ಲಿ ನೈಸರ್ಗಿಕವಾಗಿಯೇ ಅಧಿಕ ನಾರಿನಂಶವಿದೆ. ಇದು ಜೀರ್ಣಕ್ರಿಯೆಯನ್ನು ಸುಲಭವಾಗಿಸುವುದು. ಜೊತೆಗೆ ದೇಹದಲ್ಲಿ ಇರುವ ತ್ಯಾಜ್ಯವನ್ನು ಕರುಳಿನ ಮೂಲಕ ಹೊರ ಹಾಕಲು ಸಹಾಯ ಮಾಡುವುದು.
ಶಿಲೀಂಧ್ರಗಳ ಸೋಂಕನ್ನು ತಡೆಯುವುದು
ಮೂಲಂಗಿ ನೈಸರ್ಗಿಕವಾಗಿ ಆಂಟಿಫಂಲ್ ವಿರೋಧಿ ಗುಣಲಕ್ಷಣವನ್ನು ಪಡೆದುಕೊಂಡಿದೆ. ಮೂಲಂಗಿಯ ಆಹಾರವನ್ನು ಗಣನೀಯವಾಗಿ ಸೇವಿಸುವುದರಿಂದ ಸಾಮಾನ್ಯವಾದ ಶಿಲೀಂಧ್ರ ಸೋಂಕಿಗೆ ಒಳಗಾದ ಜೀವಕೋಶಗಳು ನಾಶವಾಗುತ್ತವೆ.
ಮೂತ್ರ ಪಿಂಡದ ಸಮಸ್ಯೆ
ಮೂಲಂಗಿಯ ರಸವು ಉರಿಯೂತದ ಸಮಸ್ಯೆಯನ್ನು ನಿವಾರಿಸುವುದು. ಮೂತ್ರನಾಳದ ಕಾಯಿಲೆಗೆ ಸಂಬಂಧಿಸಿದಂತೆ ಸುಡುವ ಸಂವೇದನೆಗಳನ್ನು ನಿವಾರಿಸಲು ಸಹಾಯ ಮಾಡುವುದು.
ಆಹಾರದಲ್ಲಿ ಮೂಲಂಗಿಯನ್ನು ಸೇರಿಸಿಕೊಳ್ಳುವುದು ಹೇಗೆ?
- ಮೂಲಂಗಿಯನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಬಹುದು. ಮೂಲಂಗಿಯನ್ನು ಬಿಳಿ ವಿನೆಗರ್, ಬೆಳ್ಳುಳ್ಳಿ, ಲವಂಗ, ಕರಿಮೆಣಸು, ಸೋಂಪು, ಕೊತ್ತಂಬರಿ ಬೀಜ ಮೆಣಸಿನಕಾಳು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಬೆರೆಸಿ ಉಪ್ಪಿನಕಾಯನ್ನು ತಯಾರಿಸಿಕೊಳ್ಳಬಹುದು.
- ಮೂಲಂಗಿಯ ಸೊಪ್ಪು ಮತ್ತು ಮೂಲಂಗಿಯನ್ನು ತಾಜಾ ಸಲಾಡ್ಗ ಳ ರೂಪದಲ್ಲಿ ಸವಿಯಬಹುದು.
- ಲೆಟಿಸ್ ಮತ್ತು ಮೂಲಂಗಿಯ ತೆಳುವಾದ ಸ್ಲೈಸ್ಗಳನ್ನು ಬರ್ಗರ್ಗಳಲ್ಲಿ ಸೇರಿಸಿ ಸವಿಯಬಹುದು.
- ಮೂಲಂಗಿಯ ಸಾಂಬಾರ್, ಪರೋಟಾ, ಪಲ್ಯ ಸೇರಿದಂತೆ ಇನ್ನಿತರ ಖಾದ್ಯಗಳ ರೂಪದಲ್ಲಿ ಸವಿಯಬಹುದು.
- ಮೂಲಂಗಿಯ ರಸವನ್ನು ಸಹ ಕುಡಿಯಬಹುದು.
- ಮೂಲಂಗಿ ಹೋಳುಗಳನ್ನು ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯೊಂದಿಗೆ ಹುರಿದುಕೊಂಡು ತಿನ್ನಬಹುದು.
PublicNext
28/11/2020 07:26 pm