ನ್ಯೂಯಾರ್ಕ್: ಸತತ 8 ತಿಂಗಳಿಂದ ಹೆಮ್ಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ್ದ ಭಾರತ ಮೂಲದ ಅಮೆರಿಕನ್ ಖ್ಯಾತ ವೈದ್ಯ ಅಜಯ್ ಲೋಧಾ (58) ಅವರು ನಿಧನರಾಗಿದ್ದಾರೆ.
ಅಮೆರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್(ಎಎಪಿಐ) ಮಾಜಿ ಅಧ್ಯಕ್ಷರಾಗಿದ್ದ ಅಜಯ್ ಲೋಧಾ ಅವರು 8 ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕ್ಲೀವ್‌ಲ್ಯಾಂಡ್ ಆಸ್ಪತ್ರೆಯಲ್ಲಿ ನವೆಂಬರ್ 21ರಂದು ಸಾವನ್ನಪ್ಪಿದ್ದಾರೆ. ಅಜಯ್ ಲೋಧಾ ಅವರು ಪತ್ನಿ ಸ್ಮಿತಾ, ಮಗ ಅಮಿತ್ ಮತ್ತು ಮಗಳು ಶ್ವೇತಾ ಅವರನ್ನು ಅಗಲಿದ್ದಾರೆ.
ಲೋಧಾ ಅವರಿಗೆ ನರ್ಗಿಸ್ ದತ್ ಸ್ಮಾರಕ ಪ್ರತಿಷ್ಠಾನವು 2008ರಲ್ಲಿ ವರ್ಷದ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 2016ರಲ್ಲಿ ಪ್ರತಿಷ್ಠಿತ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಆನರ್ ಗೌರವಕ್ಕೆ ಪಾತ್ರರಾಗಿದ್ದರು.
PublicNext
23/11/2020 06:24 pm