ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತ್ಯಕ್ರಿಯೆ ಬಳಿಕ ವೃದ್ಧೆ ಪ್ರತ್ಯಕ್ಷ- ಬೆಚ್ಚಿಬಿದ್ದ ಕುಟುಂಬಸ್ಥರು

ಕೋಲ್ಕತ್ತಾ: ಅಂತ್ಯಕ್ರಿಯೆ ಬಳಿಕ ವೃದ್ಧೆಯೊಬ್ಬರು ಪ್ರತ್ಯಕ್ಷವಾದ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಖಾರ್ಡಾದ ಬಾಲ್ರಂಪುರ್ ನಿವಾಸಿ ವೃದ್ಧೆ ಶಿಬ್ದಾಸ್ ಬ್ಯಾನರ್ಜಿ (75) ಅವರು ಶವಸಂಸ್ಕಾರದ ನಂತರ ಮನೆಗೆ ಮರಳಿ ಗಾಬರಿ ಹುಟ್ಟಿಸಿದವರು. ಕೊರೊನಾದಿಂದ ಮೃತಪಟ್ಟವರ ಬಗ್ಗೆ ಮಾಹಿತಿ ನೀಡುವಲ್ಲಿ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಘಟನೆ ನಡೆದಿದೆ.

ಶಿಬ್ದಾಸ್​ ಆಸ್ಪತ್ರೆಗೆ ದಾಖಲಾಗಿದ್ದ ದಿನವೇ ಅಷ್ಟೇ ವಯಸ್ಸಿನ ಮೋಹಿನಿಮೋಹನ್ ಮುಖರ್ಜಿ ಎಂಬವರು ದಾಖಲಾಗಿದ್ದರು. ಆದರೆಚಿಕಿತ್ಸೆ ಫಲಿಸದೇ ಮೋಹಿನಿಮೋಹನ್ ಅವರು ಮೃತಪಟ್ಟಿದ್ದರು. ಇತ್ತ ವೈದ್ಯಾಧಿಕಾರಿಗಳು ಶಿಬ್ದಾಸ್​ ಕುಟುಂಬಸ್ಥರಿಗೆ ಕರೆ ಮಾಡಿ ಅವರಿಗೆ ಶವವನ್ನು ಹಸ್ತಾಂತರ ಮಾಡಲಾಗಿತ್ತು. ಶವವೂ ಸಂಪೂರ್ಣ ಸೀಲ್​ ಆಗಿರುವ ಕಾರಣ, ಕುಟುಂಬದವರೂ ಶವವನ್ನು ನೋಡಲಿಲ್ಲ. ಹಾಗೆಯೇ ಸಂಸ್ಕಾರ ನೆರವೇರಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮಾರನೆ ದಿನ ಶಿಬ್ದಾಸ್​ ಕುಟುಂಬಸ್ಥರಿಗೆ ಕರೆ ಮಾಡಿ ತುರ್ತಾಗಿ ಬರುವಂತೆ ಹೇಳಿದ್ದಾರೆ. ನಂತರ ಕುಟುಂಬಸ್ಥರು ಬಂದು ನೋಡಿದಾಗ ಶಿಬ್ದಾಸ್ ಬ್ಯಾನರ್ಜಿ ಅಲ್ಲಿಯೇ ಇದ್ದರು. ಅರೆ ಕ್ಷಣ ಕುಟುಂಬಸ್ಥರು ಹೌಹಾರಿ ಹೋಗಿದ್ದಾರೆ.

Edited By : Vijay Kumar
PublicNext

PublicNext

23/11/2020 02:38 pm

Cinque Terre

46.54 K

Cinque Terre

2

ಸಂಬಂಧಿತ ಸುದ್ದಿ