ಬೆಳಕಿನ ಹಬ್ಬ ಸಂಭ್ರಮದಿಂದ ಆಚರಿಸುವ ಭರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೊರೊನಾ ಸುರಕ್ಷಾ ನಿಯಮಗಳು ಗಾಳಿಗೆ ತೂರಿದ ಪರಿಣಾಮ ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿದೆ. ಸೆಪ್ಟೆಂಬರ್ ನಂತರದ 47 ದಿನಗಳ ಬಳಿಕ ಸಕ್ರಿಯ ಪ್ರಕರಣಗಳು ಹೊಸ ಸೋಂಕಿತರ ಸಂಖ್ಯೆಯನ್ನೇ ಹಿಂದಿಕ್ಕಿವೆ.
ಜನರ ನಿರ್ಲಕ್ಷ್ಯ ಮಾಲಿನ್ಯ ಪೀಡಿತವಾಗಿರುವ ದೆಹಲಿಯಲ್ಲಿ ಈಗಾಗಲೇ ಮೂರನೇ ಕೊರೊನಾ ಅಲೆ ದಟ್ಟವಾಗಿದೆ. ಅಹಮದಾಬಾದ್ ರಾಜಕೋಟ್, ಸೂರತ್, ವಡೋದರಾ, ಮಧ್ಯಪ್ರದೇಶ, ಇಂದೋರ್, ಭೋಪಾಲ್, ಗ್ವಾಲಿಯರ್, ವಿದಿಶಾ, ರತ್ಲಂ ಮಹಾರಾಷ್ಟ್ರದ ಮುಂಬೈ, ಪುಣೆ ಸೇರಿ ಹಲವು ನಗರಗಳಲ್ಲಿ ದೀಪಾವಳಿ ಬಳಿಕ ಹೊಸ ಕೇಸ್ ಏರಿಕೆ ಕಂಡಿವೆ. ಈಗ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೋಂಕಿನ ಪರಿಣಾಮ ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ಕರ್ಫ್ಯೂ ಜಾರಿ ಮಾಡಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ.
ಈ ಕಾರಣ ನ.23 ರಿಂದ ಶಾಲಾ ಕಾಲೇಜುಗಳನ್ನ ಆರಂಭಿಸುವುದಾಗಿ ಹೇಳಿದ್ದ ಗುಜರಾತ್ ಸರ್ಕಾರ ಮತ್ತೆ ಆ ನಿರ್ಧಾರ ಕೈ ಬಿಟ್ಟಿದೆ. ಮತ್ತೋಂದೆಡೆ ದೆಹಲಿಯಲ್ಲಿ ಕೊರೊನಾ ಕಾರಣ ಮುಂಬೈ ದೆಹಲಿ ನಡುವಿನ ವಿಮಾನ ಸೇವೆ ಹಾಗೂ ರೈಲು ಸಂಚಾರ ಬಂದ್ ಆಗಿದೆ.
ಸದ್ಯದ ಸ್ಥಿತಿಯಲ್ಲಿ ದೇಶದಲ್ಲಿನ ಕೊರೊನಾ ಪ್ರಕರಣಗಳು ಏರಿದ್ದು 32 ಸಾವಿರದಿಂದ 47 ಸಾವಿರ ಏರಿಕೆ ಕಂಡಿವೆ. ದೀಪಾವಳಿ ಹಬ್ಬದಲ್ಲೇ ಈ ಏರಿಕೆ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ದೀಪಾವಳಿ ವೇಳೆಗೆ 1300-1500 ಹೊಸ ಪ್ರಕರಣಗಳು ಕಂಡು ಬಂದಿವೆ.
PublicNext
21/11/2020 12:40 pm