ಬೆಂಗಳೂರು: ಕೊರೊನಾ ವೈರಸ್ ಹರಡಂತೆ ತಡೆಯಲು ಮಾಸ್ಕ್ ಧರಿಸವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆದ್ರೆ ಕೆಲವರು ಈ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಅಂತೆ ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ದಂಡ ವಿಧಿಸಿದ್ದ ಮಾರ್ಷಲ್ ವಿರುದ್ಧವೇ ಯುವತಿಯೊಬ್ಬಳು ನಿಂದಿಸಿ, ಹಣವನ್ನು ಬಿಸಾಕಿರುವ ಘಟನೆ ನಡೆದಿದೆ.
ಈ ದೃಶ್ಯದ ವಿಡಿಯೋವನ್ನು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಟ್ವೀಟ್ ಮಾಡಿದ್ದು, 'ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಬಿಬಿಎಂಪಿ ಮಾರ್ಷಲ್‌ಗಳು ಮಾಸ್ಕ್ ಧರಿಸದೆ ಓಡಾಡುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದಾರೆ. ಮಾರ್ಷಲ್‌ಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಅವರನ್ನು ನಿಂದಿಸುವುದು ಅಪರಾಧವಾಗಿದೆ. ಇಂತಹವರ ವಿರುದ್ಧ ಬೆಂಗಳೂರು ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ' ಎಂದು ಎಚ್ಚರಿಗೆ ಸಂದೇಶ ನೀಡಿದ್ದಾರೆ.
ಈ ವಿಡಿಯೋದಲ್ಲಿ ಯುವತಿ, 'ನಿಮ್ಮಂತವರೇ ಕೊರೊನಾ ಬಂದು ಸಾಯುವುದು. ಸುಮ್ಮನೆ ನಮ್ಮ ಪಾಡಿಗೆ ನಾವು ಹೋಗುತ್ತಿದ್ದರೆ ತೊಂದರೆ ಕೊಡುತ್ತೀರಾ ಎಂದು ಪ್ರಶ್ನಿಸಿ ನಿಂದಿಸಿದ್ದಾಳೆ. ಇದಕ್ಕೆ ತಾಳ್ಮೆಯಾಗಿಯೇ ಉತ್ತರಿಸಿರುವ ಮಾರ್ಷಲ್, 'ನಿಮ್ಮ ಮಾತನ್ನು ಆರ್ಶೀವಾದವಾಗಿ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.
PublicNext
13/11/2020 04:04 pm