ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಸೋಂಕು:ಬಿಜೆಪಿ ಶಾಸಕ ಸಾವು

ನವದೆಹಲಿ : ಡೆಡ್ಲಿ ಸೋಂಕು ಇನ್ನು ತನ್ನ ಕ್ರೌರ್ಯತೆಯನ್ನು ಮುಂದುವರೆಸಿದ್ದು ಮಾರಕ ಸೋಂಕಿಗೆ ಮತ್ತೋರ್ವ ಜನಪ್ರತಿನಿಧಿ ಬಲಿಯಾಗಿದ್ದಾರೆ.

ಉತ್ತರಾ ಖಂಡದ ಬಿಜೆಪಿ ಶಾಸಕ ಸೋಂಕಿನಿಂದ ಸುಧಾರಿಸಿಕೊಳ್ಳದೆ ಸಾವನ್ನಪ್ಪಿದ್ದಾರೆ.

ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಸಾಲ್ಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಂದ್ರ ಸಿಂಗ್ ಜೀನಾ ಅವರು ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸುರೇಂದ್ರ ಸಿಂಗ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಗುರುವಾರ ಬೆಳಗ್ಗೆ ಸುರೇಂದ್ರ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

12/11/2020 10:42 am

Cinque Terre

41.48 K

Cinque Terre

0

ಸಂಬಂಧಿತ ಸುದ್ದಿ