ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್‌ನ್ಯೂಸ್: ಅಮೆರಿಕದ ಫೈಜರ್ ಕೋವಿಡ್ ಲಸಿಕೆ ಶೇ. 90 ಸಕ್ಸೆಸ್

ನವದೆಹಲಿ: ಮನುಕುಲವನ್ನೇ ಕಾಡಿದ ಹೆಮ್ಮಾರಿ ಕೊರೊನಾಗೆ ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ಲಸಿಕೆ ಸಂಶೋಧನೆ ನಡೆಯುತ್ತಿದೆ. ಈಗಾಗಲೇ ಅನೇಕ ಕಂಪನಿಗಳು ಪ್ರಯೋಗ ನಡೆಸಿ ತಮ್ಮ ಲಸಿಕೆ ಬಗ್ಗೆ ವರದಿಯನ್ನು ನೀಡಿದೆ.

ಈ ಎಲ್ಲ ಬೆಳವಣಿಗೆಯ ಮಧ್ಯೆ ದೈತ್ಯ ಔಷಧ ತಯಾರಕಾ ಕಂಪನಿ ಅಮೆರಿಕದ ಫೈಜರ್ ಮತ್ತು ಬಯೋ ಅಂಡ್‌ ಟೆಕ್‌ ಕಂಪನಿಗಳು ಗುಡ್‌ನ್ಯೂಸ್ ನೀಡಿದೆ. 'ಮೂರನೇ ಹಂತದ ಪ್ರಯೋಗದಲ್ಲಿ ತಾವು ಅಭಿವೃದ್ಧಿಪಡಿಸಿದ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ' ಎಂದು ಮಾಹಿತಿ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಫೈಜರ್‌ನ ಸಿಇಒ ಆಲ್ಬರ್ಟ್‌ ಬ್ಯೂರ್ಲಾ ಅವರು, ''ನಾವು ಕೋವಿಡ್19 ವೈರಸ್‌ಗೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿಯುವ ಕೊನೆ ಹಂತದಲ್ಲಿ ಇದ್ದೇವೆ. ಸದ್ಯದಲ್ಲೇ ವಿಶ್ವವೇ ಹೆಮ್ಮಾರಿ ಕೊರೊನಾದಿಂದ ಮುಕ್ತಿ ಕಾಣಲಿದೆ. ಈ ನಿಟ್ಟಿನಲ್ಲಿ ಪ್ರಯೋಗ ಮುಂದುವರಿದಿದೆ' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

10/11/2020 04:19 pm

Cinque Terre

51.55 K

Cinque Terre

3