ವಾಷಿಂಗ್ಟನ್: ಡೆಡ್ಲಿ ಸೋಂಕು ಕೊರೊನಾ ತನ್ನ ಕ್ರೂರತೆಯನ್ನು ಮುಂದುವರೆಸಿದ್ದು ಇದುವರೆಗೆ ಜಗತ್ತಿನಾದ್ಯಂತ 4.96 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 12 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್ ವರ್ಡೊ ಮೀಟರ್ ತಿಳಿಸಿದೆ.
ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 49,645,847ಕ್ಕೆ ಮುಟ್ಟಿದ್ದು, 12,47,971 ಮಂದಿ ಮೃತಪಟ್ಟಿದ್ದಾರೆ.
3,52,43,033 ಸೋಂಕಿತರು ಗುಣಮುಖರಾಗಿದ್ದಾರೆ.
ಒಟ್ಟು 1,31,54,843 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.
ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 1,00,55,680 ಜನರಿಗೆ ಕೋವಿಡ್-19 ದೃಢಪಟ್ಟಿದೆ.
ಸದ್ಯ 2,42,203 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 63,88,923 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ 84,60,773, ಬ್ರೆಜಿಲ್ ನಲ್ಲಿ 56,32,505, ರಷ್ಯಾದಲ್ಲಿ 17,33,440, ಕೊಲಂಬಿಯಾದಲ್ಲಿ 11,27,733, ಪೆರುವಿನಲ್ಲಿ 9,17,503, ಚಿಲಿಯಲ್ಲಿ 5,18,390, ಇರಾನ್ ನಲ್ಲಿ 6,63,800, ಇಂಗ್ಲೆಂಡ್ ನಲ್ಲಿ 11,46,484, ಸ್ಪೇನ್ ನಲ್ಲಿ 13,88,411 ಮತ್ತು ದಕ್ಷಿಣ ಆಫ್ರಿಕಾದಲ್ಲಿ 6,76,084 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.
PublicNext
07/11/2020 07:41 am