2020 ನೇ ಇಸ್ವಿ ಯಾವುದಕ್ಕೂ ಸರಿಯಿಲ್ಲ ಇಡೀ ವಿಶ್ವಕ್ಕೆ ಈ ವರ್ಷ ಕಂಟಕ ಎನ್ನುವ ಮಾತುಗಳು ಎಲ್ಲೇಡೆ ಸಾಮಾನ್ಯವಾಗಿವೆ.
ಇದು ಸತ್ಯ ಎನ್ನುವಂತಹ ಅನೇಕ ದುರ್ಘಟನೆಗಳು ನಮ್ಮ ಕಣ್ಮುಂದೆ ನಡೆದಿವೆ ಇದರ ಮಧ್ಯೆ ಬಿಜೆಪಿ ಪಾಳಯಕ್ಕೂ 2020 ಕಂಟಕಪ್ರಾಯವಾಗಿಯೇ ಪರಿಣಮಿಸಿದೆ.
ಅದರಲ್ಲೂ ಸೆಪ್ಟೆಂಬರ್ ನಲ್ಲಿ ನಡೆದ 2 ಆಘಾತಕಾರಿ ಘಟನೆಗಳು ಬಿಜೆಪಿ ಸೇರಿದಂತೆ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ.
ಹೌದು ಇದೇ ಸೆ.17 ರಂದು ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕೊರೊನಾ ಕಾರಣಕ್ಕೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಸೆಪ್ಟಂಬರ್ 23 ರ ಬುಧವಾರದಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಇದೇ ಡೆಡ್ಲಿ ಸೋಂಕಿಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದು ನಿಜಕ್ಕೂ ಅರಿಗಿಸಿಕೊಳ್ಳಲಾಗದ ನೋವು..
ಈ 2 ದುರ್ಘಟನೆಯಿಂದಾಗಿ ಕೇವಲ ಒಂದು ವಾರದ ಅವಧಿಯಲ್ಲಿ ರಾಜ್ಯ ಬಿಜೆಪಿಗೆ ಎರಡು ದೊಡ್ಡ ಆಘಾತ ಎದುರಾದಂತಾಗಿದ್ದು, ಕೊರೊನಾ ಎಂಬ ಮಹಾಮಾರಿಗೆ ಓರ್ವ ರಾಜ್ಯಸಭಾ ಸದಸ್ಯ ಹಾಗೂ ಓರ್ವ ಲೋಕಸಭಾ ಸದಸ್ಯರನ್ನು ಕಳೆದುಕೊಂಡಂತಾಗಿದೆ.
ಅಶೋಕ್ ಗಸ್ತಿ ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಸುರೇಶ್ ಅಂಗಡಿ ಸತತ ನಾಲ್ಕು ಅವಧಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಈ ಇಬ್ಬರ ಅಕಾಲಿಕ ಸಾವು ಬಿಜೆಪಿಯನ್ನು ಮಾತ್ರವಲ್ಲದೆ ರಾಜ್ಯದ ಜನತೆಗೂ ಆಘಾತ ತಂದಿದೆ.
PublicNext
24/09/2020 07:21 am