ಪಬ್ಲಿಕ್ ನೆಕ್ಸ್ಟ್ ಕಳಕಳಿ : ಕೇಶವ ನಾಡಕರ್ಣಿ
ಮಕ್ಕಳನ್ನು Online Class ಗೆ ಒತ್ತಾಯಿಸುತ್ತಿದ್ದೀರಾ? ಶಾಲೆಗಳು ಬಂದಾಗಿದ್ದರಿಂದ ಮಕ್ಕಳು ಗ್ಯಾಜೆಟ್ ದಾಸರಾಗಿದ್ದಾರೆಯೇ? ನಿರಂತರವಾಗಿ ಇಯರ್, ಫೋನ್ ಹೆಡ್‌ಸೆಟ್ ಬಳಸುತ್ತಿದ್ದಾರೆಯೆ? ಬೇಡ...ಖಂಡಿತ ಬೇಡ. ಇವೆಲ್ಲವುಗಳಿಂದ ದಯವಿಟ್ಟು ನಿಮ್ಮ ಮಕ್ಕಳನ್ನು ದೂರವಿಡಿ. ಪುಸ್ತಕಗಳನ್ನು ಮಾತ್ರ ಓದಲು ಹೇಳಿ, ಶಾಲೆ ಪ್ರಾರಂಭವಾಗುವವರೆಗೆ ಸಂಯಮದಿಂದ ವೇಟ್ ಮಾಡಿ. ಮಕ್ಕಳು ತರಗತಿಗೆ ಹಾಜರಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ.
ಒಂದು ವೇಳೆ ಇವೆಲ್ಲವುಗಳನ್ನು ಮೀರಿ ಮಕ್ಕಳನ್ನು Online Class ಗೋ, ಗ್ಯಾಜೆಟ್ ಬಳಕೆಗೆ ಅವಕಾಶ ಮಾಡಿಕೊಟ್ಟಿರೋ ಅನಾಹುತ ಕಟ್ಟಿಟ್ಟ ಬುತ್ತಿ.
Online Class ಗಾಗಿ ಹೆಡ್ ಫೋನ್ ದೊಂದಿಗೆ ನಿರಂತರ ಲ್ಯಾಪ್ ಟಾಪ್ ಬಳಸುತ್ತಿದ್ದ ಅನಿಶ್ ಎಂಬ 12 ವರ್ಷದ ಬಾಲಕನ ಮೆದುಳು ನಿಷ್ಕ್ರಯಗೊಂಡು ಮೃತಪಟ್ಟ ದಾರುಣ ಘಟನೆ ಕೇರಳದ ತಿರುವನಂತಪುರದಿಂದ ವರದಿಯಾಗಿದೆ. ಗ್ಯಾಜೆಟ್ ಗಳ ಹೆಚ್ಚಿನ ಬಳಕೆಯಿಂದ ವಿಕಿರಣವು ಆತನ ಮೆದುಳಿನ ಮೇಲೆ ಪರಿಣಾಮ ಬೀರಿ ಆಮ್ಲಜನಕದ ಪೂರೈಕೆ ಸ್ಥಗಿತವಾಗಿತ್ತು ಎಂದ ವೈದ್ಯರು ಹೇಳಿದ್ದಾರೆ.
ಮೆದುಳಿನ ಮೇಲೆ ವಿಪರೀತ ಒತ್ತಡ
ಅನಿಶ್ ಆನ್‌ಲೈನ್ ತರಗತಿಗಳು 10 ಕ್ಕೆ ಪ್ರಾರಂಭವಾಗುತ್ತಿದ್ದವು. ಆದ್ದರಿಂದ ಬೆಳಿಗ್ಗೆ 9 ಗಂಟೆಗೇ ಲ್ಯಾಪ್‌ಟಾಪ್ ಆನ್ ಮಾಡುತ್ತಿದ್ದ. ಆನ್‌ಲೈನ್ ತರಗತಿಗಳು ಬೆಳಗ್ಗೆ 10 ರಿಂದ ರಾತ್ರಿ 11 ರವರೆಗೆ ನಡೆಯುತ್ತಿದ್ದವು. ಮಧ್ಯ ವಿರಾಮ ವೇಳೆಯಲ್ಲಿ ಆತ ಮೊಬೈಲ್‌ನಲ್ಲಿ ವ್ಯಸ್ಥವಾಗಿರುತ್ತಿದ್ದ. ಹೀಗಾಗಿ ಯಾವುದೆ ದೈಹಿಕ ಚಟುವಟಿಕೆ ಇರಲಿಲ್ಲ. ಕೊರೊನಾ ಭಯದಿಂದ ಯಾರೂ ಆಡಲು ಸಹ ಬರುತ್ತಿರಲಿಲ್ಲ.
ಕಳೆದ ಒಂದು ವಾರದಿಂದ ಆತನ ಆರೋಗ್ಯದಲ್ಲಿ ಏರುಪೇರಾಗ ತೊಡಗಿತ್ತು. ಅದಕ್ಕೆ 2 ದಿನಗಳ ಮೊದಲು ಅವರ ಎಡಗೈಯಲ್ಲಿ ನೋವು ಕಾಣಿಸಿಕೊಂಡಿತ್ತು. ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಆತ Online Classದಿಂದ ದೂರ ಉಳಿದು ಪೋಷಕರೊಂದಿಗೆ ಇರಲು ಬಯಸಿದ.
ಆತನ ವರ್ತನೆ ಕಂಡು ಪೋಷಕರು ಆಶ್ಚರ್ಯಚಕಿತರಾಗಿ ವಿಶ್ರಾಂತಿ ಪಡೆಯಲು ಹೇಳಿದರು. ಆತ ನಿದ್ರೆ ಮಾಡಲು ಪ್ರಯತ್ನಿಸಿದ ಆದರೆ ಸಾಧ್ಯವಾಗಲಿಲ್ಲ, ಏನೋ ತಳಮಳ, ಕಚೇರಿಗೆ ಹೋಗದಂತೆ ತಂದೆಗೆ ಹೇಳಿದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗೋಣವೆಂದಾಗ, ಎಲ್ಲೆಡೆ ಕರೋನಾ ಆಸ್ಪತ್ರೆಗೆ ಬೇಡ ಒಳ್ಳೆಯ ನಿದ್ರೆಯ ನಂತರ ತಾನು ಸರಿಯಾಗುತ್ತೇನೆ ಅನೀಶ್ ಹೇಳಿದ.
ತಂದೆ ಕಚೇರಿಗೆ ಹೋದ ನಂತರ ಹಸಿವಾಗಿದೆ ಎಂದು ಹೇಳಿ ದೋಸೆ ತಿಂದು ಮತ್ತೆ ಮಲಗಲು ಪ್ರಯತ್ನಿಸಿದ ಆದರೆ ಸಾಧ್ಯವಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಅರೋಗ್ಯ ಬಿಗಡಾಯಿಸಿತು. ತಂದೆ 15 ನಿಮಿಷದಲ್ಲಿ ಮನೆಗೆ ಬಂದಾಗ ಆತ ತಂದೆಯನ್ನು ತಬ್ಬಿಕೊಂಡು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ.
ಆತನನ್ನು ಕಾರಿನಲ್ಲಿ ಕೂಡ್ರಿಸಿ ಇನ್ನೇನು ಕಾರು ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಅಲ್ಲಿಯೇ ಕುಸಿದು ಬಿದ್ದ. ಕೇವಲ 4 ಕಿ.ಮೀ ದೂರದಲ್ಲಿರುವ ಆಸ್ಪತ್ರೆ ತಲುಪುವಷ್ಟರಲ್ಲಿ ಮಗುವಿನ ಮೆದುಳು ನಿಷ್ಕ್ರಿಯವಾಗಿತ್ತು. ವೈದ್ಯರು ಎಲ್ಲ ರೀತಿ ಪ್ರಯತ್ನಸಿದರು, ವೆಂಟಿಲೇಟರ್ ಅಳವಡಿಸಿದರು.ಯಾವುದೇ ಪ್ರಯೋಜವಾಗದೆ ಮಗು ಇಹಲೋಕ ತ್ಯಜಿಸಿತ್ತು.
ಹೇಳಿ.....ಬೇಕಾ Online Class? ಮಕ್ಕಳ ಭವಿಷ್ಯಕ್ಕಾಗಿ ಈ ವ್ಯವಸ್ಥೆ ಉತ್ತಮವಾಗಿರಬಹುದು ಆದರೆ ದೈಹಿಕವಾಗಿ ಮಕ್ಕಳು ಅದರ ದುಷ್ಪರಿಣಾಮ ಸಹಿಸುವ ಸಾಮರ್ಥ್ಯ ಹೊಂದಿವೆಯೇ ಎಂಬುದನ್ನು ಪಾಲಕರು ಗಮನಿಸಬೇಕು. ಅನಿಶ್ ನಂತೆ ಇತರ ಮಕ್ಕಳ ಕನಸು ನುಚ್ಚು ನೂರಾಗುವುದು ಬೇಡ ಎಂಬುದು PublicNext ಕಳಕಳಿ.
ಈ ಲಾಕ್‌ಡೌನ್ ಅವಧಿಯಲ್ಲಿ ಇದು 3 ನೇ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
PublicNext
03/11/2020 10:57 am