ಇತ್ತಿಚ್ಚಿನ ಆಹಾರ ಹೇಗಿದೆ ಅಂದ್ರೆ ಆಹಾರ ಸೇವಿಸಿದ ಮೇಲೆ ಅದನ್ನು ಜೀರ್ಣಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ.
ಆ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಾಸಿವೆ ಅತ್ಯಂತ ಸಹಾಯಕಾರಿಯಾಗಿದೆ.
ಆರೋಗ್ಯ ಕಾಪಾಡುವಲ್ಲಿ ಸಾಸಿವೆಯ ಪಾತ್ರ ಬಹಳ ದೊಡ್ಡದು.
ಸಾಸಿವೆಯಲ್ಲಿರುವ ಗ್ಲುಕೋಸಿನೊಲೇಟ್ ಗಳು ಮತ್ತು ಮೈರೋಸಿನೇಸ್ ನಂಥ ಸಂಯುಕ್ತಗಳು ಕ್ಯಾನ್ಸರ್ ಉಂಟುಮಾಡುವ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ತಲೆನೋವು ಅಥವಾ ಮೈಗ್ರೇನ್ ನಿಂದ ಬಳಲುವ ಮಂದಿಗೆ ಸಾಸಿವೆ ಹೇಳಿ ಮಾಡಿಸಿದ ಔಷಧ.
ಇದು ನರಗಳ ನೋವನ್ನು ನಿಯಂತ್ರಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.
ಅಜೀರ್ಣ ಸಮಸ್ಯೆಯಿದ್ದರೆ ಸಾಸಿವೆ ಬಳಸಿ. ಇದರಲ್ಲಿರುವ ನಾರಿನಂಶ ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಅಜೀರ್ಣದಿಂದ ಉಂಟಾಗುವ ಹೊಟ್ಟೆ ನೋವು ಅಥವಾ ವಾಂತಿ ಸಮಸ್ಯೆಯನ್ನು ದೂರಮಾಡುತ್ತದೆ.
ಹೃದಯ ಸಂಬಂಧಿ ಸಮಸ್ಯೆ ಇರುವವರು, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ನಿತ್ಯ ಆಹಾರದಲ್ಲಿ ಸಾಸಿವೆ ಬಳಸಿ.
ಸಾಸಿವೆ ಎಲುಬುಗಳನ್ನು ಬಲಪಡಿಸುತ್ತದೆ. ಉಗುರು, ಕೂದಲು ಮತ್ತು ಹಲ್ಲುಗಳನ್ನು ದೃಢಗೊಳಿಸುತ್ತದೆ.
PublicNext
03/11/2020 09:23 am