ನವದೆಹಲಿ- ಕೊರೊನಾ ಖಾಯಿಲೆ ಮೊದಲ ಹಂತದಲ್ಲಿರುವಾಗಲೇ ಆಯುರ್ವೇದ ಔಷಧ ನೀಡಿದ್ದಲ್ಲಿ ಸಂಪೂರ್ಣ ಗುಣಮುಖರಾಗಬಹುದು. ಹೀಗಂತ ದೆಹಲಿ ಮೂಲದ ಅಖಿಲ ಭಾರತ ಆಯುರ್ವೇದ ವೈದ್ಯಕೀಯ ಸಂಸ್ಥೆ (ಎಐಎಂಐಎಲ್) ಹೇಳಿದೆ. ಇದು ಈಗಾಗಲೇ ಪ್ರಯೋಗಾತ್ಮಕವಾಗಿ ಯಶಸ್ಸನ್ನೂ ಕಂಡಿದೆ.
ಆಯುರ್ವೇದದ ಚಿಕಿತ್ಸಾ ಕ್ರಮಗಳಾದ ಆಯುಷ್ ಕ್ವಾಥ, ಸಂಶಮನಿವತಿ, ಫಿಫಾಟ್ರಾಲ್ ಮಾತ್ರೆ, ಲಕ್ಷ್ಮೇ ವಿಲಾಸ ರಸ ಗಳ ಬಳಕೆಯಿಂದ ಕೋವಿಡ್- 19 ರೋಗಿಯ ವರದಿ ನೆಗೆಟಿವ್ ಬಂದಿದೆ.
ಎಐಎಂಐಎಲ್ ಸಂಸ್ಥೆಯು ಸುಮಾರು 35 ಗಿಡಮೂಲಿಕೆಗಳಿಂದ ಫಿಫಟ್ರಾಲ್ ಎಂಬ ಮಾತ್ರೆ ಸಿದ್ಧಪಡಿಸಿದೆ. ಇದು ಕೋವಿಡ್ ಸೋಂಕು ಮೊದಲ ಹಂತದಲ್ಲಿರುವ ರೋಗಿಗೆ ನೀಡಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅಮೃತ ಬಳ್ಳಿ, ದಾರುಹರಿದ್ರಾ, ಕರಂಜ, ಕುಟಕಿ, ತುಳಸಿ, ಗೋದಂತಿ, ಸಂಜೀವಿನಿ, ಮೃತ್ಯುಂಜಯ ರಸ ಹಾಗೂ ಇನ್ನಿತರ ಗಿಡ ಮೂಲಿಕೆಗಳಿಂದ ಫಿಫಾಟ್ರಾಲ್ ಮಾತ್ರೆ ತಯಾರಿಸಲಾಗಿದೆ. ಜೊತೆಗೆ ಇನ್ನೂ ಹಲವು ಕಷಾಯಗಳನ್ನೂ ಕೂಡ ಕೊರೊನಾ ಲಸಿಕೆಯಾಗಿ ಸಂಶೋಧಿಸಲಾಗಿದೆ ಎಂದು ಅಖಿಲ ಭಾರತ ಆಯುರ್ವೇದ ವೈದ್ಯಕೀಯ ಸಂಸ್ಥೆ ತಿಳಿಸಿದೆ.
PublicNext
02/11/2020 03:58 pm