ಬೆಂಗಳೂರು : ಕೊರೊನಾ ರೌದ್ರವತಾರದ ಮುಂಜಾಗ್ರತೆಗೆ ಈ ಮಾಸ್ಕ್ ಒಂದು ಮಾನದಂಡವಾಗಿದೆ ನೋಡಿ ಈಗಾಗಲೇ ಕಾರಿನಲ್ಲಿ ಒಬ್ಬರೇ ಪ್ರಯಾಣಿಸಿದರೂ ಮಾಸ್ಕ್ ಬಳಕೆ ಕಡ್ಡಾಯ ಎಂದು ಹೇಳಿದ್ದು ಈ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧದ ಟೀಕೆಯ ಮಾತು ಕೇಳಿ ಬಂದಿವೆ.
ಈ ಬಗ್ಗೆ ವಿವರಣೆ ಕೇಳಿ ಆರೋಗ್ಯ ಇಲಾಖೆಗೆ ಬಿಬಿಎಂಪಿ ಪತ್ರ ಸಹ ಬರೆದಿದ್ದೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯವರೂ ಈ ವರೆಗೂ ನಾವು ಯಾವುದೇ ಆದೇಶಗಳನ್ನು ಹಿಂಪಡೆದುಕೊಂಡಿಲ್ಲ. ಜನರ ಸುರಕ್ಷತೆಗಾಗಿ ಆದೇಶ ನೀಡಲಾಗಿದೆ. ಆರೋಗ್ಯ ಇಲಾಖೆ ಸ್ಪಷ್ಟನೆ ನೀಡುತ್ತಿದ್ದಂತೆಯೇ ಆದೇಶ ವಾಪಸ್ ಪಡೆಯುವ ಕುರಿತಂತೆ ವಿಚಾರ ನಡೆಸಲಾಗುತ್ತಿದೆ ಎಂದು ಮಂಜುನಾತ್ ಪ್ರಸಾದ್ ಅವರು ತಿಳಿಸಿದ್ದಾರೆ.
ಮಂಜುನಾಥ್ ಪ್ರಸಾದ್ ಅವರು ಬರೆದೆ ಪತ್ರವನ್ನು ಆರೋಗ್ಯ ಇಲಾಖೆ ಮರುಪರಿಶೀಲನೆಗೆ ತಾಂತ್ರಿಕ ಸಮಿತಿಗೆ ಕಳುಹಿಸಿದೆ
ಸಮಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ತಜ್ಞರಿದ್ದು, ಈ ಬಗ್ಗೆ ಮರುಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಹಿರಿಯರೊಬ್ಬರು ಮಾತನಾಡಿ, ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಸ್ಕ್'ಗಳನ್ನು ಯಾರೆಲ್ಲಾ ಧರಿಸಬೇಕು ? ಯಾವಾಗ ಧರಿಸಬೇಕೆಂಬುದರ ? ಬಗ್ಗೆ ಗೊಂದಲಗಳಿದ್ದವು. ಒಬ್ಬಂಟಿಯಾಗಿ ವ್ಯಕ್ತಿ ಕಾರಿನಲ್ಲಿ ತೆರಳುತ್ತಿದ್ದಾಗ ಕಿಟಕಿ ಗಾಜುಗಳನ್ನು ಹಾಕಿದ್ದಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದೆವು. ಬಿಬಿಎಂಪಿ ಆಯುಕ್ತರು ಈ ಆದೇಶ ಏತಕ್ಕೆ ತಂದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಒಟ್ಟಾರೆ ಈಗಾಗಲೇ ಒಬ್ಬಂಟಿಯಾಗಿ ಕಾರಿನಲ್ಲಿ ಚಲಿಸುವಾಗ ಮಾಸ್ಕ್ ಹಾಕದ ಬಗ್ಗೆ ದಂಡದ ಮೊತ್ತ ಕುಸಿಯಲು ಮುಂದಾಗಿರುವ ಬಿಬಿಎಂಪಿ ಮುಂದೆ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದೆಯೋ ಗೊತ್ತಿಲ್ಲ ಆದರೆ ಈ ಕುರಿತು ಸಾರ್ವಜನಿಕರು ಮಾತ್ರ ತಣ್ಣಗಾಗಿಲ್ಲ.
PublicNext
30/10/2020 12:31 pm