ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾ ದೇಶಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು ಸಾವುನೋವುಗಳ ಸಂಖ್ಯೆ ಗಣನೀಯ ಪ್ರಯಾಣದಲ್ಲಿ ಏರುತ್ತಿದೆ.
ಈ ಕೋವಿಡ್ ಕಾಲದಲ್ಲಿ ಕೇವಲ 5 ತಿಂಗಳಲ್ಲಿ 356 ತಾಯಂದಿರ ಸಾವನಪ್ಪಿದ್ದಾರೆ.
ಸಕಾಲದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗರ್ಭಿಣಿಯರು ಸಾವನಪ್ಪಿದ್ದಾರೆ.
ಏಪ್ರಿಲ್ ನಿಂದ ಆಗಸ್ಟ್ ವರೆಗಿನ ಐದು ತಿಂಗಳ ಅವಧಿಯಲ್ಲಿ 356 ತಾಯಂದಿರು ಮೃತಪಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಯಂದಿರ ಮರಣ ಪ್ರಮಾಣ ದರ ಕಡಿಮೆ ಮಾಡಲು ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಹೀಗಿದ್ದರೂ ರಾಜ್ಯದಲ್ಲಿ ಪ್ರತಿ ವರ್ಷ ಹೆರಿಗೆ ವೇಳೆ 600ಕ್ಕೂ ಅಧಿಕ ಮಹಿಳೆಯರು ಕೊನೆಯುಸಿರೆಳೆಯುತ್ತಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 3,300ಕ್ಕೂ ಅಧಿಕ ತಾಯಂದಿರು ಸಾವಿಗೀಡಾಗಿದ್ದಾರೆ.
ಕೋವಿಡ್ ನಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು ಗರ್ಭಾವಸ್ಥೆಯ ತಪಾಸಣೆಗೆ ಪರದಾಟ ನಡೆಸಬೇಕಾಗದ ಪರಿಸ್ಥಿತಿ ಇದೆ.
ಅಧಿಕ ಮರಣ ವರದಿಯಾದ ಜಿಲ್ಲೆಗಳು (ಏಪ್ರಿಲ್-ಆಗಸ್ಟ್)
ಜಿಲ್ಲೆ; ಪ್ರಕರಣಗಳು
ಕಲಬುರ್ಗಿ; 35
ಬೆಂಗಳೂರು ನಗರ; 32
ಧಾರವಾಡ; 29
ಬೆಳಗಾವಿ; 24
ಬಳ್ಳಾರಿ; 24
ರಾಯಚೂರು; 23
ವರ್ಷವಾರು ತಾಯಂದಿರ ಮರಣ ಪ್ರಕರಣಗಳು
ವರ್ಷ; ಪ್ರಕರಣಗಳು
2014-15; 467
2015-16; 657
2016-17; 648
2017-18; 739
2018-19; 632
2019-20; 662
PublicNext
22/10/2020 08:51 am